ದರ್ಶನ್ ಸ್ನೇಹಿತರಿಂದಲೇ ನನಗೆ ಬೆದರಿಕೆ: ನಿರ್ಮಾಪಕ ಉಮಾಪತಿ ಬಾಂಬ್

ದರ್ಶನ್ ಸ್ನೇಹಿತರಿಂದಲೇ ನನಗೆ ಬೆದರಿಕೆ: ನಿರ್ಮಾಪಕ ಉಮಾಪತಿ ಬಾಂಬ್

25 ಕೋಟಿ ರೂ. ವಂಚನೆ ಯತ್ನ ಪ್ರಕರಣದಲ್ಲಿ ಪೊಲೀಸರ ಮುಂದೆ ಬಾಯಿ ಬಿಡದಂತೆ ನಟ ದರ್ಶನ್ ಸ್ನೇಹಿತರೇ ನನಗೆ ಬೆದರಿಕೆ ಒಡ್ಡಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಬಾಂಬ್ ಸಿಡಿಸಿದ್ದಾರೆ.

ದರ್ಶನ್ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ, ಪ್ರಕರಣದ ಕುರಿತು ಪೊಲೀಸರ ಮುಂದೆ ಹೇಳಿಕೆ ನೀಡದಂತೆ ದರ್ಶನ್ ಸ್ನೇಹಿತರಾದ ಹರ್ಷ, ರಾಕೇಶ್ ಮತ್ತು ಶರ್ಮ ಅವರಿಂದ ನನಗೆ ಬೆದರಿಕೆ ಇದೆ ಎಂದಿದ್ದಾರೆ.

ಸ್ನೇಹಿತರಿಂದಲೇ ದರ್ಶನ್ ಅವರನ್ನು ದೂರ ಮಾಡಲು ಯತ್ನಿಸಿಲ್ಲ. ಯಾರನ್ನೂ ಯಾರಿಂದಲೂ ದೂರ ಮಾಡುವ ಚೀಪ್ ಕ್ಯಾರೆಕ್ಟರ್ ನಂದಲ್ಲ. ನನಗೆ ಅದರ ಅವಶ್ಯಕತೆ ಕೂಡ ಇಲ್ಲ. ನನಗೆ 25 ಕೋಟಿ ಲೆಕ್ಕವೇ ಅಲ್ಲ. ನಮ್ಮಪ್ಪ ಕೊಟ್ಟ ಭಿಕ್ಷೆಯಿಂದ ನಾನು ಬದುಕುತ್ತಿದ್ದೇನೆ. ಯಾರಿಗೋ ಮೋಸ ಮಾಡಿ ಬದುಕುವ ಅವಶ್ಯಕತೆ ನನಗಿಲ್ಲ. ಎಂದು ಉಮಾಪತಿ ಸ್ಪಷ್ಟಪಡಿಸಿದರು.

ದರ್ಶನ್ ಹೇಳಿದಂತೆ ನನಗೆ 2 ದಿನ ಸಮಯ ಕೊಟ್ಟಿಲ್ಲ. ಬದಲಾಗಿ ನಾನೇ 2-3 ದಿನ ಸಮಯ ಕೊಡಿ ಪತ್ತೆ ಹಚ್ಚುತ್ತೇನೆ ಎಂದು ಹೇಳಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ. ನಿನ್ನೆ ಮಾಧ್ಯಮದಲ್ಲಿ ಯಾವುದೇ ಹೇಳಿಕೆ ಕೊಡಬೇಡ ಎಂದು ದರ್ಶನ್ ಸೂಚಿಸಿದ್ದಕ್ಕೆ ಮಾತನಾಡಲಿಲ್ಲ ಎಂದು ಅವರು ಹೇಳಿದರು.

ನನಗೆ ಸಿನಿಮಾವೇ ಜೀವನ. ನಾನು ಆರ್ಥಿಕವಾಗಿ ಚೆನ್ನಗಿದ್ದೇನೆ. ನನಗೆ ಹಣದ ಅವಶ್ಯಕತೆ ಇಲ್ಲ. ನನಗೆ5-6 ಬ್ಯುಸಿನೆಸ್ ಇದೆ. ವಿಜಯನಗರದಲ್ಲಿ ಹರಾಜು ಮೂಲಕ ಆಸ್ತಿ ಖರೀದಿ ಮಾಡುವಾಗ ಅರುಣಾಕುಮಾರಿ ನನಗೆ ಪರಿಚಯ ಆಗಿದ್ದು, ದರ್ಶನ್ ಗೆ ಕರೆ ಮಾಡಿ ಮಾತನಾಡಿದ ನಂತರವೇ ಆಕೆಯನ್ನು ಪರಿಚಯಿಸಿದ್ದೆ ಎಂದು ಉಮಾಪತಿ ವಿವರಿಸಿದರು.