'ಪಠಾಣ್' ಚಿತ್ರಕ್ಕೆ ನೀವು ಪಡೆದ ಸಂಭಾವನೆ ಎಷ್ಟು? ಅಭಿಮಾನಿ ಪ್ರಶ್ನೆಗೆ ಶಾರುಕ್ ಉತ್ತರ ಏನು?

'ಪಠಾಣ್' ಚಿತ್ರಕ್ಕೆ ನೀವು ಪಡೆದ ಸಂಭಾವನೆ ಎಷ್ಟು? ಅಭಿಮಾನಿ ಪ್ರಶ್ನೆಗೆ ಶಾರುಕ್ ಉತ್ತರ ಏನು?

ಶಾರುಕ್ ಖಾನ್ ನಟನೆಯ 'ಪಠಾಣ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಚಿತ್ರಕ್ಕಾಗಿ ಕಿಂಗ್ ಖಾನ್ ಭಾರೀ ಸಂಭಾವನೆ ಪಡೆದಿದ್ದಾರೆ ಎನ್ನುವ ಚರ್ಚೆ ಇತ್ತೀಚೆಗೆ ನಡೆದಿತ್ತು. ಸಂಭಾವನೆ ಬಗ್ಗೆ ಅಭಿಮಾನಿಯೊಬ್ಬ ನೇರವಾಗಿ ಶಾರುಕ್ ಬಳಿ ಕೇಳಿದ್ದಾನೆ.

ಇದನ್ನು ಬಾಲಿವುಡ್ ಬಾದ್‌ಶಾ ಉತ್ತರ ಕೂಡ ಕೊಟ್ಟಿದ್ದಾರೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಪಠಾಣ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. 'ಬೇಷರಂ ರಂಗ್' ಸಾಂಗ್ ವಿವಾದದಿಂದ 'ಪಠಾಣ್' ಸಿನಿಮಾ ಭಾರೀ ಸದ್ದು ಮಾಡಿದ್ದು ಗೊತ್ತೇಯಿದೆ. ಚಿತ್ರದಲ್ಲಿ ಶಾರುಕ್ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಅಬ್ಬರಿಸಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಪವರ್‌ಫುಲ್ ರೋಲ್‌ನಲ್ಲಿ ಬಾಲಿವುಡ್ ಬಾದ್‌ಶಾಗೆ ಸಾಥ್ ಕೊಟ್ಟಿದ್ದಾರೆ. ಯಶ್‌ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಆಗಿದೆ.

'ಪಠಾಣ್' ಚಿತ್ರಕ್ಕಾಗಿ ಶಾರುಕ್ ಖಾನ್ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಗುಸು ಗುಸು ಕೇಳಿಬರ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬನ ಪ್ರಶ್ನೆಗೆ ಕಿಂಗ್ ಖಾನ್ ಉತ್ತರಿಸಿದ್ದಾರೆ.