ಸಿಎಂ ಬೊಮ್ಮಾಯಿ, ಸಚಿವ ಆನಂದ್ ಸಿಂಗ್ ಪೋಸ್ಟರ್ ಗೆ ಕಪ್ಪು ಮಸಿ

ಬೆಂಗಳೂರು: ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳ ಪುಂಡಾಟ ಮುಂದುವರೆದಿದ್ದು, ಮುಂಬೈನ ಮಾಹಿಮ್ ಬಸ್ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ ಅವರ ಪೋಸ್ಟರ್‌ಗೆ ಕಪ್ಪು ಮಸಿ ಬಳಿಯಲಾಗಿದೆ. ಮುಂಬೈನ ಮಾಹಿಮ್ ಬಸ್ ನಿಲ್ದಾಣದಲ್ಲಿ ರಾಜ್ಯದ ಪ್ರವಾಸೋದ್ಯಮದ ಜಾಹೀರಾತು ಇದ್ದ ಪೋಸ್ಟರ್‌ನಲ್ಲಿನ ಸಿಎಂ ಬೊಮ್ಮಾಯಿ, ಸಚಿವ ಆನಂದ್ ಸಿಂಗ್ ಅವರ ಚಿತ್ರಕ್ಕೆ ಕಪ್ಪು ಬಣ್ಣ ಬಳಿಯಲಾಗಿದೆ.