ಚರ್ಮಗಂಟು ರೋಗ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 30 ಕೋಟಿ ರೂ. ಬಿಡುಗಡೆ

ಚರ್ಮಗಂಟು ರೋಗ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 30 ಕೋಟಿ ರೂ. ಬಿಡುಗಡೆ

ರಾಜ್ಯ ಸರ್ಕಾರವು ಚರ್ಮಗಂಟು ರೋಗ ಪರಿಹಾರಕ್ಕೆ 30 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಚರ್ಮಗಂಟು ರೋಗ ಪ್ರಾರಂಭವಾದಾಗ ಈ ಹಿಂದೆ 2 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಆದರೂ ಸಾವಿರಾರು ಜಾನುವಾರುಗಳು ಮೃತಪಟ್ಟಿವೆ. ಹೀಗಾಗಿ ಜಾನುವಾರು ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಾರದು ಎಂದು ಸಿಎಂ 30 ಕೋಟಿ ರೂ. ಪರಿಹಾರ ಧನ ನೀಡಿದ್ದಾರೆ ಎಂದರು.