ಮೂಲಸೌಕರ್ಯಗಳಿಲ್ಲದೇ ಕೊರಗುತ್ತಿರುವ ಐತಿಹಾಸಿಕ ಸ್ಮಾರಕಗಳು

ಮೂಲಸೌಕರ್ಯಗಳಿಲ್ಲದೇ ಕೊರಗುತ್ತಿರುವ ಐತಿಹಾಸಿಕ ಸ್ಮಾರಕಗಳು

ಬೀದರ್‌: ಜಿಲ್ಲೆಯಲ್ಲಿನ ಇತಿಹಾಸ ಪ್ರಸಿದ್ದ ಸ್ಮಾರಕಗಳನ್ನು ನೋಡಲು ಪ್ರವಾಸಿಗರು ಸೇರಿದಂತೆ ಶಾಲಾ-ಕಾಲೇಜುಗಳಿಂದ ನೂರಾರು ಮಕ್ಕಳು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಶಾಲಾ-ಮಕ್ಕಳಿಗೆ ಇಲ್ಲಿನ ಇತಿಹಾಸ ಪರಿಚಯಿಸಲು ಗಾರ್ಡ್‌‌ಗಳು ಇಲ್ಲ. ಅಲ್ಲದೇ, ಮೂಲಸೌಕರ್ಯಗಳಿಲ್ಲದೇ ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ. ಇಂತಹ ಪ್ರವಾಸಿ ಸ್ಥಳಗಳಿಗೆ ಭದ್ರತೆಯೂ ಇಲ್ಲ. ಹಾಗಾಗಿ ಪ್ರವಾಸೋದ್ಯಮ ಬೆಳೆಸುವ ಬಗ್ಗೆ ಜಿಲ್ಲಾಡಳಿತಕ್ಕೆ ಚಿಂತೆಯೇ ಇಲ್ಲದಂತಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.