ರಾಜಸ್ಥಾನ: ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ನಲ್ಲಿ ಚಪ್ಪಲಿ, ಶೂ ಸಾಗಾಣೆ. ವಿಡಿಯೋ ವೈರಲ್
ದೌಸಾ (ರಾಜಸ್ಥಾನ): ಜೈಪುರದಿಂದ ದೌಸಾಗೆ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಪಾದರಕ್ಷೆಗಳನ್ನು ಸಾಗಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ದೌಸಾ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕನನ್ನು ಕೆಲಸದಿಂದ ತೆಗೆದುಹಾಕಲಾಗಿದೆ
ಮಾಧ್ಯಮಗಳೊಂದಿಗೆ ಮಾತನಾಡಿದ ದೌಸಾ ಸರ್ಕಾರಿ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ (ಪಿಎಂಒ) ಡಾ. ಶಿವರಾಮ್ ಮೀನಾ, ಎನ್ಜಿಒ ನೇಮಿಸಿದ ಆಂಬ್ಯುಲೆನ್ಸ್ ಚಾಲಕ ಆಂಬ್ಯುಲೆನ್ಸ್ನಲ್ಲಿ ಚಪ್ಪಲಿ, ಶೂ ಸಾಗಾಣೆ ಮಾಡಿದ್ದಾನೆ. ಈ ವಿಷಯ ತಿಳಿದ ಕೂಡಲೇ ಅವನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಮತ್ತು ತನಿಖೆಗಾಗಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.