ಬ್ರೆಜಿಲ್ನಲ್ಲಿ 6 ಸೆಂ.ಮೀ ಉದ್ದದ ಬಾಲದೊಂದಿಗೆ ಹೆಣ್ಣು ಮಗು ಜನನ : ಶಸ್ತ್ರಚಿಕಿತ್ಸೆ ಯಶಸ್ವಿ
ಬ್ರೆಜಿಲ್ : ಬ್ರೆಜಿಲ್ನಲ್ಲಿ 6 ಸೆಂ.ಮೀ ಉದ್ದದ 'ಬಾಲ'ದೊಂದಿಗೆ ಜನಿ
ಈ ಜಗತ್ತಿನಲ್ಲಿ ಪ್ರತಿ ಸೆಕೆಂಡಿಗೆ ಶಿಶುಗಳು ಜನಿಸುತ್ತದೆ . ಒಂದು ಕುಟುಂಬದಲ್ಲಿ ಮಗುವಿನ ಆಗಮನವೆಂದರೆ ಸಂತೋಷದ ಹೊನಲು ಹರಿಯುವಂತಹ ಸಮಯ. ಎಲ್ಲರೂ ಈ ಸಮಯಕ್ಕೆ ಕಾತುರರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯವಂತಹ ಮಗುವ ಹುಟ್ಟಲಿ ಎಂದು ಹಾರೈಸುತ್ತಾರೆ.
ಯಾಕೆಂದರೆ ನಮ್ಮಆಧುನಿಕ ಜೀವನಶೈಲಿಯಿಂದಾಗಿ ಜನಿಸುವ ಮಗುವಿನ ಮೇಲೆ ಪರಿಣಾಮ ಬೀರುವ ಹಲವು ಸುದ್ದಿಗಳನ್ನು ನೋಡಬಹುದು. ಇಂತಹದ್ದೇ ಒಂದು ಘಟನೆ ಬ್ರೆಜಿಲ್ನಲ್ಲಿ ನಡೆದಿದ್ದು, 6 ಸೆಂ.ಮೀ ಉದ್ದದ 'ಬಾಲ'ದೊಂದಿಗೆ ಹೆಣ್ಣು ಮಗುವಿಗೆ ಜನನವಾಗಿದೆ ಎಂದು ವರದಿಯಾಗಿದೆ.
ಬ್ರೆಜಿಲ್ನಲ್ಲಿ ಜನಿಸಿದ ಹೆಣ್ಣು ಮಗು 6 ಸೆಂ.ಮೀ ಉದ್ದದ ಬಾಲದೊಂದಿಗೆ ಜನ್ಮ ನೀಡಿದೆ. ಆಕೆಯ ಪ್ರಕರಣವನ್ನು ವೈದ್ಯಕೀಯ ನಿಯತಕಾಲಿಕಗಳಲ್ಲಿ ವರದಿ ಮಾಡಲಾಯಿತು, ನಂತರ ಶಸ್ತ್ರಚಿಕಿತ್ಸಕರು ಶಸ್ತ್ರಚಿಕಿತ್ಸೆ ಮಾಡಿದರು ಬಳಿಕ ಬಾಲವನ್ನು ತೆಗೆದುಹಾಕಿದ್ದಾರೆ.
ಜರ್ನಲ್ನಲ್ಲಿ ವಿವರಿಸಲಾದ ಪ್ರಕರಣ ಅಧ್ಯಯನವು ಹೀಗೆ ಹೇಳಿದ್ದು, 'ನವಜಾತ ಶಿಶುವು ಸಿಸೇರಿಯನ್ ಹೆರಿಗೆಯ ಮೂಲಕ ಜನಿಸಿದೆ, ಅನಾರೋಗ್ಯ ಅಥವಾ ಮಾದಕವಸ್ತುಗಳಿಗೆ ಒಡ್ಡಿಕೊಳ್ಳುವ ತಾಯಿಯ ಇತಿಹಾಸವಿಲ್ಲ. ದೈಹಿಕ ಪರೀಕ್ಷೆಯಲ್ಲಿ 6 ಸೆಂ.ಮೀ ಚರ್ಮದಿಂದ ಆವೃತವಾದ ಮೃದು ಅಂಗಾಂಶ ಬಾಲವು ಲುಂಬೊಸಾಕ್ರಲ್ ಪ್ರದೇಶದಿಂದ ಬೆಳೆಯುತ್ತಿರುವುದು ಕಂಡುಬಂದಿದೆ. ನವಜಾತ ಶಿಶುವು ನರವೈಜ್ಞಾನಿಕ ಕೊರತೆಗಳು ಅಥವಾ ಇತರ ಡಿಸ್ಮಾರ್ಫಿಯಾಗಳನ್ನು ತೋರಿಸಲಿಲ್ಲ. ಪ್ರಸವಾನಂತರದ ಎಂಆರ್ಐ ಸ್ಪೈನಾ ಬಿಫಿಡಾವನ್ನು ಗುರುತಿಸಿದೆ.
ಸ್ನಾಯುವಿನ ಫ್ಲಾಪ್ ಬಳಸಿ ಚರ್ಮದ ಸೈನಸ್ ಲಿಗೇಶನ್, ಅಪೆಂಡೇಜ್ ತೆಗೆದುಹಾಕುವಿಕೆ ಮತ್ತು ಡಿಸ್ರಾಫಿಸಮ್ ಮುಚ್ಚುವಿಕೆಯೊಂದಿಗೆ ಶಸ್ತ್ರಚಿಕಿತ್ಸೆಯ ನಡೆಸಲಾಯಿತು. 36 ತಿಂಗಳ ನಂತರ ರೋಗಿಯು ಸಾಮಾನ್ಯ ನರವೈಜ್ಞಾನಿಕ ಪರೀಕ್ಷೆ ಕಾಸ್ಮೆಟಿಕ್ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ಎಂದು ಜೆಒಪಿಎಸ್ನಲ್ಲಿನ ವರದಿ ಬಹಿರಂಗಪಡಿಸಿದೆ .
ಸಿದ ಹೆಣ್ಣುಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವರದಿಯಾಗಿದೆ.