ಅಂಕಪಟ್ಟಿ ಮುದ್ರಣ ಲೋಪದೋಷ ಸರಿಪಡಿಸಲು ಎ.ಬಿ.ವಿ.ಪಿ. ಆಗ್ರಹ

ಅಂಕಪಟ್ಟಿ ಮುದ್ರಣ ಲೋಪದೋಷ ಸರಿಪಡಿಸುವಂತೆ ಒತ್ತಾಯಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವವಿದ್ಯಾಲಯದಿಂದ ವಿತರಿಸಲಾಗಿರುವ ಅಂಕಪಟ್ಟಿಯ ಮುದ್ರಣದಲ್ಲಿ ಉಂಟಾಗಿರುವ ಲೋಪದೋಷಗಳನ್ನು ಕೂಡಲೇ ಬಗೆಹರಿಸಿ, ಮರು ಮುದ್ರಣ ಮಾಡಿ ಅಂಕಪಟ್ಟಿ ವಿತರಿಸಬೇಕು ಹಾಗೂ 10 ದಿನಗಳ ಒಳಗಾಗಿ ಎನ್.ಇ.ಪಿ. ವಿದ್ಯಾರ್ಥಿಗಳ 1 ಮತ್ತು 2 ನೇ ಸೆಮಿಸ್ಟರ್ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ.
ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ, ಅರುಣ್ ಅಮರಗೋಳ, ವಿದ್ಯಾನಂದ್ ಸ್ಥಾವರಮಠ, ಉಲ್ಲಾಸ ಗೋಡಿ, ವೆಂಕಟೇಶ್ ಲಮಾಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.