'ಕಾಂತಾರ' ನೋಡಿ ಮೆಸೇಜ್ ಮಾಡ್ದೆ. .ಕನ್ನಡ ಅಂದ್ರೆ ಪ್ರೀತಿ ಇದೆ: ರಶ್ಮಿಕಾ

'ಕಾಂತಾರ' ನೋಡಿ ಮೆಸೇಜ್ ಮಾಡ್ದೆ. .ಕನ್ನಡ ಅಂದ್ರೆ ಪ್ರೀತಿ ಇದೆ: ರಶ್ಮಿಕಾ

ಕಾಂತಾರ' ಸಿನಿಮಾ ನೋಡಿಲ್ಲ ಎಂದು ರಶ್ಮಿಕಾ ಹೇಳಿದ್ದು ಕೆಲವರು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅಪ್ ಡೇಟ್ ನೀಡಿರುವ ರಶ್ಮಿಕಾ ಮಂದಣ್ಣ, 'ಕಾಂತಾರ' ಸಿನಿಮಾ ನೋಡಿ ಚಿತ್ರತಂಡಕ್ಕೆ ಮೆಸೇಜ್ ಮಾಡಿದ್ದೆ. ಅವರು ಥ್ಯಾಂಕ್ಯೂ ಎಂದು ರಿಪ್ಲೇ ಮಾಡಿದ್ದರು. ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನನ್ನ ವೈಯಕ್ತಿಕ ವಿಚಾರಗಳನ್ನು ಕ್ಯಾಮರಾ ಇಟ್ಟು ತೋರಿಸಲು ಸಾಧ್ಯವಿಲ್ಲ. ನನ್ನ ಯಾರು ಬ್ಯಾನ್ ಮಾಡಿಲ್ಲ, ಕನ್ನಡ ಸಿನಿಮಾಗಳ ಬಗ್ಗೆ ನನಗೆ ಪ್ರೀತಿ ಇದ್ದೇ ಇರುತ್ತದೆ ಎಂದಿದ್ದಾರೆ.