ದೇಶದ ಜನತೆಗೆ ಬೂಸ್ಟರ್ ಡೋಸ್ ಸಿಗೋದು ಯಾವಾಗ?: ರಾಹುಲ್

ದೇಶದ ಜನತೆಗೆ ಬೂಸ್ಟರ್ ಡೋಸ್ ಸಿಗೋದು ಯಾವಾಗ?: ರಾಹುಲ್

ನವದೆಹಲಿ, ಡಿಸೆಂಬರ್ 22: ಕೊರೊನಾ ವೈರಸ್‌ನ ಮೂರನೇ ಅಲೆ ಬಾರದಂತೆ ತಡೆಯಲು ದೇಶದ ಜನತೆಗೆ ಬೂಸ್ಟರ್‌ ಡೋಸ್‌ನ ಅಗತ್ಯವಿದೆ, ಸರ್ಕಾರ ನೀಡುವುದು ಯಾವಾಗ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಕೊರೊನಾ ವೈರಸ್ ಮೂರನೇ ಅಲೆ ತಡೆಗಟ್ಟುವ ಹಿನ್ನಲೆಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಶೇ.60 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಬೇಕಿತ್ತು, ಆದರೆ ಕೇವಲ ಶೇ.42 ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪ್ರತಿದಿನ 55.3 ಮಿಲಿಯನ್ ಡೋಸ್ ಲಸಿಕೆ ಕೊರತೆಯಿದೆ. ದೇಶದ ಬಹಸಂಖ್ಯಾತ ಜನರಿಗೆ ಇನ್ನೂ ಲಸಿಕೆ ನೀಡಿಲ್ಲ, ಹೀಗಿರುವಾಗ ಭಾರತ ಸರ್ಕಾರ ಬೂಸ್ಟರ್ ಡೋಸ್ ಯಾವಾಗ ನೀಡಲಿದೆ ಎಂದು ಪ್ರಶ್ನಿಸಿದೆ.

ಮೂರನೇ ಅಲೆ ವಿರುದ್ಧ ಹೋರಾಡಲು ಡಿಸೆಂಬರ್ 2021ರ ವೇಳೆಗೆ ದೇಶದ ಶೇ. 60 ರಷ್ಚು ಜನರಿಗೆ ಲಸಿಕೆ ನೀಡಬೇಕಿತ್ತು, ಆದರೆ ಆಗಲಿಲ್ಲ, ಪ್ರತಿದಿನ ಲಸಿಕೆ ಕೊರತೆ ಎದುರಾಗುತ್ತಿದೆ ಎಂದು ದೂರಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ ಲಸಿಕೆ ನೀಡುವ ವೇಗವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸರ್ಕಾರ ದೇಶದ ಜನರಿಗೆ ಲಸಿಕೆ ನೀಡಿರುವ ಬಗ್ಗೆ ಅಂಕಿ ಅಂಶ ಹಂಚಿಕೊಂಡಿರುವ ರಾಹುಲ್ ಗಾಂಧಿ ಬೂಸ್ಟರ್ ಡೋಸ್ ಯಾವಾಗ ನೀಡಲಿದ್ದೀರಿ ಎಂದು ಪ್ರಶ್ನಿಸಿದೆ.

ಇಂಟ್ರಾನೇಸಲ್ ಕೋವಿಡ್-19 ಲಸಿಕೆಯ 3 ನೇ ಹಂತದ ಪ್ರಯೋಗಕ್ಕೆ ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಭಾರತದ ಔಷಧ ನಿಯಂತ್ರಕ (ಡಿಸಿಜಿಐ) ದಿಂದ ಅನುಮತಿ ಕೇಳಿದೆ.

ಇಂಟ್ರಾನೇಸಲ್ (ಬಿಬಿವಿ154) ಕೋವಿಡ್-19 ಲಸಿಕೆಯನ್ನು ಕೊರೋನಾ ವಿರುದ್ಧ ಬೂಸ್ಟರ್ ಡೋಸ್ ನ್ನಾಗಿ ಬಳಕೆ ಮಾಡಲು ಸಂಸ್ಥೆ ಉದ್ದೇಶಿಸಿದೆ. "ಅನುಮತಿ ಕೇಳಿ ಮನವಿ ಸಲ್ಲಿಸಲಾಗಿದೆ. ಅನುಮೋದನೆಗಾಗಿ ಕಾಯುತ್ತಿದ್ದೇವೆ, ಇಂಟ್ರಾನೇಸಲ್ ಲಸಿಕೆಯನ್ನು ಈಗಾಗಲೇ ಎರಡು ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿರುವವರಿಗೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಬೂಸ್ಟರ್ ಡೋಸ್ ನ್ನಾಗಿ ಇಂಟ್ರಾನೇಸಲ್ ನೀಡುವುದರಿಂದ ಸಾಮೂಹಿಕ ಲಸಿಕೆ ಅಭಿಯಾನಕ್ಕೆ ಸಹಕಾರಿಯಾಗಲಿದ್ದು, ರೋಗ ಹರಡುವಿಕೆ ತಡೆಗಟ್ಟುವುದು ಸಾಧ್ಯವಾಗಲಿದೆ. ಎರಡನೇ ಹಂತದ ಪ್ರಯೋಗ ಈಗಾಗಲೇ ನಡೆಸಲಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ಇಂಟ್ರಾ ಮಸ್ಕ್ಯುಲರ್ ಹಾಗೂ ನೇಸಲ್ ಸಂಯೋಜನೆಯಿಂದ ಈ ಲಸಿಕೆಯನ್ನು ತಯಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಕ ಸಂಸ್ಥೆ ಭಾರತ್ ಬಯೋಟೆಕ್ ನ ಲಸಿಕೆ ಕೋವ್ಯಾಕ್ಸಿನ್ ನ ಬಳಕೆಯ ಅವಧಿಯ ಮಿತಿಯನ್ನು ಉತ್ಪಾದನೆಯ ದಿನಾಂಕದಿಂದ 12 ತಿಂಗಳಿಗೆ ಏರಿಕೆ ಮಾಡಿದೆ. ಕೋವ್ಯಾಕ್ಸಿನ್‌ನ ಮೊದಲ ಡೋಸ್ ಪಡೆದ 28 ದಿನಗಳಲ್ಲಿ ಎರಡನೇ ಡೋಸ್ ಪಡೆಯಬೇಕಿದೆ.

*ಓಮಿಕ್ರಾನ್ ಸೋಂಕಿತ ಅನೇಕ ಜನರು ಲಕ್ಷಣ ರಹಿತವಾಗಿದ್ದಾರೆ.

* ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

*ಒಂದು ಅಥವಾ ಎರಡು ದಿನಗಳವರೆಗೆ ಸುಸ್ತು ಇರಲಿದೆ.

*ಆದಾಗ್ಯೂ ಓಮಿಕ್ರಾನ್ ರೂಪಾಂತರ ಯಾವುದೇ ಹೊಸವೈಶಿಷ್ಟ್ಯಗಳು ಇಲ್ಲಿಯವರೆಗೆ ಕಂಡುಬಂದಿಲ್ಲ.

*ಗಂಟಲು ನೋವು, ತಲೆನೋವು, ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಳ್ಳಲಿದೆ.

*ಓಮಿಕ್ರಾನ್ 3ನೇ ಅಲೆ ಅನ್ನೋದು ಹಲವು ತಜ್ಞರ ಅಭಿಪ್ರಾಯ.

*ಹೊಸ ರೂಪಾಂತರಿ ಡೆಲ್ಟಾಕ್ಕಿಂತ ಹಲವಾರು ಪಟ್ಟು ಹೆಚ್ಚು ಮಾರಕ.

*ಓಮಿಕ್ರಾನ್ ಹೊಸ ರೂಪಾಂತರಿ ಡೆಲ್ಟಾಕ್ಕಿಂತ 7 ಪಟ್ಟು ವೇಗವಾಗಿ ಹರಡುತ್ತಿದೆ.

*ಹೊಸ ರೂಪಾಂತರಿಯನ್ನು ಗುರುತಿಸುವುದಕ್ಕೂ ಮುನ್ನ 32 ಬಾರಿ ರೂಪಾಂತರಗೊಂಡಿದೆ.

*ಸದ್ಯಕ್ಕೆ ಭಾರತದಲ್ಲಿ ಈ ರೂಪಾಂತರದ ಯಾವುದೇ ಪ್ರಕರಣ ದೃಢಪಟ್ಟಿಲ್ಲ