ಬಳ್ಳಾರಿಯ ಈ ಪ್ರದೇಶಗಳಲ್ಲಿ ಫೆ.26 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯಲ್ಲಿ 110/11ಕೆವಿ ಕುರುಗೊಡು ಉಪ-ಕೇಂದ್ರದ ಪರಿವರ್ತಕ-2ರ ಆಯಿಲ್ ಸೋರಿಕೆಯ ತಡೆಗಟ್ಟುವ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಫೆ.26ರಂದು ಬೆಳಗ್ಗೆ 9ರಿಂದ ಸಂಜೆ 5.00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ತಿಳಿಸಿದ್ದಾರೆ .
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-2 ಗೆಣಿಕೆಹಾಳ್ ಐಪಿ ಫೀಡರ್ ಮಾರ್ಗದ ಹೊಸ ಗೆಣಿಕೆಹಾಳ್, ಹಳೇ ಗೆಣಿಕೆಹಾಳ್ ಗ್ರಾಮಗಳು. ಎಫ್-3 ಕಲ್ಲುಕಂಭ ಐಪಿ ಫೀಡರ್ ಮಾರ್ಗದ ಲಕ್ಷ್ಮೀಪುರ, ಶ್ರೀನಿವಾಸ ಕ್ಯಾಂಪ್, ಕಲ್ಲುಕಂಭ, ಕೆರೆಕೆರೆ ಗ್ರಾಮ. ಎಫ್-4 ಹೆಚ್.ವೀರಾಪುರ ಎನ್.ಜೆ.ವೈ ಮಾರ್ಗದ ಮಾರುತಿಕ್ಯಾಂಪ್, ಹೊಸ ಯಲ್ಲಾಪುರ, ಹಳೇ ಯಲ್ಲಾಪುರ, ಶ್ರೀನಿವಾಸಕ್ಯಾಂಪ್, ಲಕ್ಷ್ಮೀಪುರ, ಕಲ್ಲುಕಂಭ, ಮುಷ್ಟಗಟ್ಟ, ಸೋಮಲಾಪುರ, ಹೆಚ್.ವೀರಾಪುರ, ಚಿಟಿಗಿನಹಾಳ್ ಮುಂತಾದ ಗ್ರಾಮಗಳು. ಎಫ್-6 ಪಟ್ಟನಸೆರಗು ಐಪಿ ಫೀಡರ್ ಮಾರ್ಗದ ಯಲ್ಲಾಪುರ ಮಾರುತಿ ಕ್ಯಾಂಪ್, ಪಟ್ಟಣಸೆರಗು, ಓರ್ವಾಯಿ, ಗುತ್ತಿಗನೂರು, ಲಕ್ಷ್ಮೀಪುರ ಗ್ರಾಮ. ಎಫ್-8 ಎಲ್.ಐ.ಎಸ್ ಎನ್.ಜೆ.ವೈ ಮಾರ್ಗದ ಹೊಸ ಗೆಣಿಕೆಹಾಳ್, ಹಳೇ ಗೆಣಿಕೆಹಾಳ್, ಕ್ಯಾದಿಗೆಹಾಳ್, ಬಸವಪುರ ಗ್ರಾಮಗಳು. ಎಫ್-9 ಬಾದನಹಟ್ಟಿ ಎನ್.ಜೆ.ವೈ ಮಾರ್ಗದ ಬಾದನಹಟ್ಟಿ, ವದ್ದಟ್ಟಿ, ಗಂಗಾಭವಾನಿ ಕ್ಯಾಂಪ್, ಸಪ್ತಗಿರಿ ಕ್ಯಾಂಪ್, ಯರ್ರಂಗಳಿ, ಕೃಷ್ಣನಗರ ಕ್ಯಾಂಪ್, ವದ್ದಟ್ಟಿ ಕ್ರಾಸ್ ಅನ್ನಪೂರ್ಣೆಶ್ವರಿ ಕ್ಯಾಂಪ್. ಎಫ್-11 ಚಿಟಿಗಿನಹಾಳ್ ಐ.ಪಿ ಮಾರ್ಗದ ಕಲ್ಲುಕಂಭ, ಚಿಟಿಗಿನಹಾಳ್, ಸೋಮಲಾಪುರ, ಹೆಚ್.ವೀರಾಪುರ. ಎಫ್-12 ಕಲ್ಲುಕಂಭ/ಕೆರೆ ಐ.ಪಿ ಮಾರ್ಗದ ಕಲ್ಲುಕಂಬ, ಕೆರೆಕೆರೆ ಗ್ರಾಮಗಳು. ಎಫ್-13 ಕ್ಯಾದಿಹಾಳ್ ಐ.ಪಿ ಮಾರ್ಗದ ಕ್ಯಾದಿಹಾಳ್, ಮುಷ್ಟಗಟ್ಟ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.