ಸಿಇಟಿ ಪ್ರವೇಶ ಪರೀಕ್ಷೆ'ಗೆ ದಿನಾಂಕ ನಿಗದಿ ; ಮೇ 20ರಿಂದ ಎಕ್ಸಾಂ ಆರಂಭ

ಸಿಇಟಿ ಪ್ರವೇಶ ಪರೀಕ್ಷೆ'ಗೆ ದಿನಾಂಕ ನಿಗದಿ ; ಮೇ 20ರಿಂದ ಎಕ್ಸಾಂ ಆರಂಭ

ಬೆಂಗಳೂರು : ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (Common Entrance Test - CET) ದಿನಾಂಕ ನಿಗದಿಯಾಗಿದ್ದು, ಮೇ 20ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಆರಂಭವಾಗಲಿವೆ.

ಅದ್ರಂತೆ, 20 ಮತ್ತು 21ರಂದು ಸಿಇಟಿ ಕನ್ನಡ ಕಡ್ಡಾಯ ಪರೀಕ್ಷೆ ನಡೆಯಲಿದೆ. ಹೊರ ನಾಡು, ಗಡಿನಾಡು ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಸಲಾಗುತ್ತೆ. ಇನ್ನು ಮೇ 22ರಂದು ಸಿಇಟಿ ಅಂಗವಾಗಿ ಕನ್ನಡ ಪರೀಕ್ಷೆ ನಡೆಸಲಾಗುವುದು. ಅಂದ್ಹಾಗೆ, ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಈ ಸಿಇಟಿ ಪರೀಕ್ಷೆ ನಡೆಸಲಾಗುತ್ತೆ.

ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದ್ರೆ ಬಿಎಸ್ಸಿ(ಕೃಷಿ), ಬಿ.ಎಸ್.ಸಿ (ರೇಷ್ಮೆ ಕೃಷಿ), ಬಿಎಸ್ಸಿ (ತೋಟಗಾರಿಕೆ), ಬಿಎಸ್ಸಿ (ಅರಣ್ಯ) ಬಿ.ಎಸ್.ಬಿ.ಎಸ್.ಕೆ(ಆಹಾರ ಮತ್ತು ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್‌ಎಸ್ಸಿ(ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್) ಸೇರಿದಂತೆ ವಿವಿಧ ಕೋರ್ಸ್ಗಳ ಪ್ರವೇಶಕ್ಕಾಗಿ ಈ ಪರೀಕ್ಷೆ ನಡೆಸಲಾಗುತ್ತೆ.