ನಟಿ ಪೂನಂ ಪಾಂಡೆ ಮೇಲೆ ಮಾರಣಾಂತಿಕ ಹಲ್ಲೆ
ನಟಿ ಪೂನಂ ಪಾಂಡೆ ಪತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪತಿ ಸ್ಯಾಮ್ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪೂನಂ ದೂರು ನೀಡಿದ್ದು, ಪೊಲೀಸರು ಸ್ಯಾಮ್‌ನ್ನು ಬಂಧಿಸಿದ್ದಾರೆ. ಪೂನಂ ಪಾಂಡೆ ಕಣ್ಣು ಹಾಗೂ ಮುಖಕ್ಕೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಇತ್ತೀಚೆಗೆ ಎಲ್ಲಿಯೂ ಪೂನಂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಈಗಾಗಲೇ ಪತಿಯ ಮೇಲೆ ಒಂದು ಬಾರಿ ಪೂನಂ ದೂರು ದಾಖಲಿಸಿದ್ದು, ಕೆಲ ಸಮಯದ ನಂತರ ಕಂಪ್ಲೆಂಟ್ ವಾಪಸ್ ಪಡೆದಿದ್ದರು. ಪತಿಯ ಜೊತೆಯೇ ಪೂನಂ ಇದ್ದರು. ಇದೀಗ ಮತ್ತೆ ಪೂನಂ ದೂರು ನೀಡಿದ್ದು, ಸ್ಯಾಮ್ ತನ್ನ ಮೊದಲ ಪತ್ನಿ ಅಲ್ವಿರಾ ಜೊತೆ ಜಗಳವಾಡಿಕೊಂಡು ಬಂದಿದ್ದರು. ಆ ಕೋಪವನ್ನು ತನ್ನ ಮೇಲೆ ತೋರಿಸಿದ್ದು, ಕೂದಲು ಹಿಡಿದು ನನ್ನ ತಲೆಯನ್ನು ಗೋಡೆಗೆ ಚಚ್ಚಿದ್ದಾರೆ, ಮುಖಕ್ಕೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.