ಸುಟ್ಟು ಕರಕಲಾಯ್ತು 2 ಲಕ್ಷ ಮೌಲ್ಯದ ಬಣವೆ
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಆಕಸ್ಮಿಕ ಬೆಂಕಿಗೆ ಅಪಾರ ಪ್ರಮಾಣದ ಬಣವೆ ಸುಟ್ಟು ಭಸ್ಮವಾಗಿದೆ. ಬಸವೆಣ್ಣೆಪ್ಪ ಶಿರಬಡಗಿ ಅನ್ನೋ ರೈತನಿಗೆ ಸೇರಿದ್ದು, ಸುಮಾರು 2 ಲಕ್ಷ ರೂ ಮೌಲ್ಯದ 20 ಟ್ರ್ಯಾಕ್ಟರ್ ಜೋಳದ ಮೇವಿನ ಬಣವೆ ನಾಶವಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಹರಸಾಹಸಪಡುತ್ತಿದ್ದಾರೆ.