ವಶಿಷ್ಟ ಕೋ ಆಪರೇಟಿವ್ ಸೊಸೈಟಿ ಹಗರಣವನ್ನು ಸಿಬಿಐಗೆ ವಹಿಸಲು ಆಗ್ರಹ

ವಶಿಷ್ಟ ಕೋ ಆಪರೇಟಿವ್ ಸೊಸೈಟಿ ಹಗರಣವನ್ನು ಸಿಬಿಐಗೆ ವಹಿಸಲು ಆಗ್ರಹ

ಬೆಂಗಳೂರು: ಹನುಮಂತನಗರದಲ್ಲಿರುವ‌ ವಶಿಷ್ಠ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೆಪಿಸಿಸಿ ವೈದ್ಯಕೀಯ ಘಟಕ ಪ್ರಧಾನ ಕಾರ್ಯದರ್ಶಿ ಡಾ.ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸರ್ಕಾರ ಕೂಡಲೇ ಈ ಬ್ಯಾಂಕ್‌ ಅನ್ನು ಸೂಪರ್‌ಸೀಡ್ ಮಾಡಿ ಆಡಳಿತಾಧಿಕಾರಿ ನೇಮಿಸಬೇಕು. ಜತೆಗೆ, ಸೊಸೈಟಿಯ ಇಂಡಿಪೆಂಡೆಂಟ್ ಆಡಿಟಿಂಗ್ ನಡೆಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸೊಸೈಟಿಯಲ್ಲಿ ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು ಠೇವಣಿ ಇಟ್ಟಿದ್ದಾರೆ. ಅಂದಾಜು 2,500-3000 ಗ್ರಾಹಕರು ಬ್ಯಾಂಕಿನಲ್ಲಿ‌ ನೋಂದಣಿ ಆಗಿದ್ದಾರೆ. ಅಂದಾಜು 450 ಕೋಟಿ ರೂ.ಹಗರಣ ನಡೆದಿದೆ. ಸೊಸೈಟಿಯ ಅಧ್ಯಕ್ಷ ಸೇರಿ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಸ್ವಾರ್ಥ, ಸ್ವಹಿತಾಸಕ್ತಿ ಮತ್ತು ಅಧಿಕಾರ ದುರುಪಯೋಗ ಪಡಿಸಿಕೊಂಡು ತಮ್ಮ ಸಂಬಂಧಿಕರಿಗೆ ಕೋಟ್ಯಂತರ ಸಾಲ ನೀಡಿದ್ದಾರೆ. ಜೀವನದಲ್ಲಿ ದುಡಿದು ಉಳಿಸಿದ ಹಣವನ್ನು ಬ್ಯಾಂಕಿನಲ್ಲಿ ರೇವಣಿ ಇಟ್ಟಿರುವ ಗ್ರಾಹಕರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಡಾ.ಶಂಕರ್ ಗುಹಾ ದ್ವಾರಕನಾಥ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಠೇವಣಿದಾರರಾದ ದ್ವಾರಕನಾಥ್, ಗೋಕುಲಾ, ಹರೀಶ್ ಮತ್ತಿತರರಿದ್ದರು.