ಭಾವೈಕ್ಯತೆ ಮೆರೆದ ಪೊಲೀಸ್ ಅಧಿಕಾರಿ ಜಾಕೀರ್ ಪಾಷಾ
ಜಾತಿ ಧರ್ಮಗಳ ನಡುವೆ ಕಂದಕ ಸೃಷ್ಟಿ ಯಾಗುತ್ತಿರುವ ಇಂದಿನ ದಿನಗಳಲ್ಲಿ ಭಾವೈಕ್ಯತೆ ಹಾಗೂ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಅಳವಡಿಸಿ ಕೊಂಡವರು ಬೆರಳಣಿಕೆ ಜನ ಸಿಗ್ತಾರೆ. ಅಂಥವರಲ್ಲಿ ಗೋಕುಲ್ ರಸ್ತೆ ಠಾಣೆಯ ಪೊಲೀಸ್ ಅಧಿಕಾರಿ ಜಾಕೀರ್ ಪಾಷಾ ಕಾಲಿಮಿರ್ಚಿ ಕೂಡ ಒಬ್ಬರು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದರೆ ದಕ್ಷ ಪೊಲೀಸ ಅಧಿಕಾರಿಗಳು ಇರಲೇ ಬೇಕು. ಈ ಸಾಲಿಗೆ ಜಾಕೀರ್ ಪಾಷಾ ಕಾಲಿಮಿರ್ಚಿ ಕೂಡ ಸೇರ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚಿಗೆ ನಡೆದ ಗಣೇಶ ಹಬ್ಬದಂದು ಹಿಂದೂ ಸಂಪ್ರದಾಯದಂತೆ ಬಿಳಿ ಬಟ್ಟೆ ಧರಿಸಿ ಹಣೆಗೆ ತಿಲಕವಿಟ್ಟು ಪೊಲೀಸ ಠಾಣೆಯಲ್ಲಿ ಸ್ವತಃ ಅವರೇ ಪ್ರತಿಷ್ಟಾಪಿಸಿದ್ದು ಅವಳಿ ನಗರದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದರು. ಅದರಂತೆ ನಿನ್ನೆ ನಡೆದ 153 ನೇ ಗಾಂಧಿ ಜಯಂತಿ ದಿನದಂದು ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಒಬ್ಬ ಸಫಾಯಿ ಕರ್ಮಚಾರಿಯಿಂದ ಪೂಜೆ ಮಾಡಿಸಿ ಸರಳತೆ ಮೆರೆದಿದ್ದಾರೆ. ಗಾಂಧೀಜಿಯವರು ಬಡವರು, ದೀನ ದಲಿತರು, ನಿರ್ಗತಿಕರು ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಈ ನಿಟ್ಟಿನಲ್ಲಿ ಗೋಕುಲ್ ರಸ್ತೆ ಪೊಲೀಸ ಠಾ ಣೆಯ ಅಧಿಕಾರಿ ಕಾಲಿಮಿರ್ಚಿ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಅಳವಡಿಕೊಳ್ಳಬೇಕು ಎಂದು ಸಾರುತ್ತಿರುವ ಸಂದೇಶ ನಿಜಕ್ಕೂ ಶ್ಲಾಘನೀಯ