ಬ್ರೆಜಿಲ್‌ನಲ್ಲಿ ಭೂಕುಸಿತ ಸಾವಿನ ಸಂಖ್ಯೆ 44ಕ್ಕೆ ಏರಿಕೆ

ಸಾವೊ ಪಾಲೊ: ಬ್ರೆಜಿಲ್‌ನ ಸಾವೊ ಪಾಲೊ ಕರಾವಳಿಯಲ್ಲಿ ಕಳೆದ ವಾರಾಂತ್ಯದಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 44 ಕ್ಕೆ ಏರಿದೆ, ಸುಮಾರು 40 ಜನರು ನಾಪತ್ತೆಯಾಗಿದ್ದಾರೆ ಎಂದು ಪ್ರಾದೇಶಿಕ ಸರ್ಕಾರ ತಿಳಿಸಿದೆ.
ಸಾವೊ ಪೌಲೊ ಸರ್ಕಾರ ಹೊರಡಿಸಿದ ಹೇಳಿಕೆಯ ಪ್ರಕಾರ, ಸಾವೊ ಸೆಬಾಸ್ಟಿಯಾವೊ ನಗರದಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತದಲ್ಲಿ 43 ಜನರು ಮತ್ತು ಉಬಾಟುಬಾದ ಕಡಲತೀರದ ರೆಸಾರ್ಟ್‌ನಲ್ಲಿ ವ್ಯಕ್ತಿಯೊಬ್ಬರು ಸಾವೀಗೀಡಾಗಿರುವುದಾಗಿ ಸರ್ಕಾರ ಹೇಳಿದೆ,
ಮಂಗಳವಾರ ಬಿಡುಗಡೆಯಾದ ಅಧಿಕೃತ ವರದಿಗಳ ಪ್ರಕಾರ, ಅವರ ಮನೆಗಳು ನಾಶವಾದ ನಂತರ 2,400 ಕ್ಕೂ ಹೆಚ್ಚು ಜನರನ್ನು ಪ್ರದೇಶದಿಂದ ಸ್ಥಳಾಂತರಿಸಬೇಕಾಯಿತು.
ಕಾರ್ನಿವಲ್ ಉತ್ಸವದ ಸಮಯದಲ್ಲಿ ಭೂಕುಸಿತ ಸಂಭವಿಸಿದೆ. ಹಲವಾರು ರಸ್ತೆಗಳು ಮತ್ತು ಕಡಲತೀರದ ರೆಸಾರ್ಟ್‌ಗಳಿಗೆ ಹೋಗುವ ಹೆದ್ದಾರಿಗಳು ಹಾನಿಗೊಳಗಾಗಿದ್ದರಿಂದ ಅನೇಕ ಪ್ರವಾಸಿಗರು ಸಿಲುಕಿಕೊಂಡರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಾವೊ ಸೆಬಾಸ್ಟಿಯಾವೊ, ಉಬಾಟುಬಾ, ಗೌರುಜಾ, ಬರ್ಟಿಯೊಗಾ, ಇಲ್ಹಬೆಲಾ ಮತ್ತು ಕ್ಯಾರಗ್ವಾಟಟುಬಾ ನಗರಗಳಿಗೆ ಹೆಚ್ಚು ದುಷ್ಪರಿರಣಾಮವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.