ಸೈಬರ್ ವಂಚಕರ ಬಳಿಯಲ್ಲಿತ್ತು ನಟಿ ಐಶ್ವರ್ಯ ರೈ ಬಚ್ಚನ್ ಹೆಸರಿನ ನಕಲಿ ಪಾಸ್ಪೋರ್ಟ್

ಸೈಬರ್ ವಂಚಕರ ಬಳಿಯಲ್ಲಿತ್ತು ನಟಿ ಐಶ್ವರ್ಯ ರೈ ಬಚ್ಚನ್ ಹೆಸರಿನ ನಕಲಿ ಪಾಸ್ಪೋರ್ಟ್

ಗ್ರೇಟರ್ ನೋಯಿಡಾದಲ್ಲಿ ಮೂವರು ಅಂತರಾಷ್ಟ್ರೀಯ ಸೈಬರ್ ವಂಚಕರನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಅವರ ಬಳಿ ಬಾಲಿವುಡ್ ಖ್ಯಾತ ನಟಿ ಐಶ್ವರ್ಯ ರೈ ಬಚ್ಚನ್ ಹೆಸರಿನ ನಕಲಿ ಪಾಸ್ಪೋರ್ಟ್ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾ ಮೂಲದ ಇಬ್ಬರು ಹಾಗೂ ಘಾನಾ ಮೂಲದ ಓರ್ವ ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳಿಂದ 3000 ಅಮೆರಿಕನ್ ಡಾಲರ್, 10,500 ಪೌಂಡ್ ಜೊತೆಗೆ 10.76 ಕೋಟಿ ರೂಪಾಯಿ ಮೌಲ್ಯದ ಭಾರತೀಯ ನಕಲಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.