ಕಾರುಗಳಿಗೆ ಏಕರೂಪಿ ತೆರಿಗೆ: ಭಾರ್ಗವ ಅಸಮಾಧಾನ

ಕಾರುಗಳಿಗೆ ಏಕರೂಪಿ ತೆರಿಗೆ: ಭಾರ್ಗವ ಅಸಮಾಧಾನ

ವದೆಹಲಿ: ಎಲ್ಲ ಬಗೆಯ ಕಾರುಗಳಿಗೂ ಒಂದೇ ಪ್ರಮಾಣದ ತೆರಿಗೆ ವಿಧಿಸುವುದು ಆಟೊಮೊಬೈಲ್ ಉದ್ಯಮದ ಬೆಳವಣಿಗೆಗೆ ಪೂರಕವಲ್ಲ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಅಧ್ಯಕ್ಷ ಆರ್‌.ಸಿ. ಭಾರ್ಗವ ಹೇಳಿದ್ದಾರೆ.

ತಯಾರಿಕಾ ವಲಯ ಇನ್ನಷ್ಟು ವೇಗವಾಗಿ ಬೆಳೆದರೆ ದೇಶದ ಒಟ್ಟು ಆರ್ಥಿಕ ಬೆಳವಣಿಗೆ ಹೆಚ್ಚಾಗಬಹುದು.

ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಒಳ್ಳೆಯ ಕ್ರಮಗಳನ್ನು ಕೈಗೊಂಡಿದ್ದರೂ ತಳಮಟ್ಟದಲ್ಲಿ ಅನುಷ್ಠಾನದಲ್ಲಿನ ಲೋಪದ ಕಾರಣದಿಂದಾಗಿ ಇದು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಆಟೊಮೊಬೈಲ್ ಉದ್ಯಮ ಆರೋಗ್ಯಕರ ಬೆಳವಣಿಗೆ ಕಾಣಬೇಕು ಎಂದಾದರೆ ಕಾರು ಖರೀದಿಸುವವರ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಇರಬೇಕು. ದೇಶದ ಸಣ್ಣ ಕಾರುಗಳ ಮಾರಾಟದಲ್ಲಿ ಬೆಳವಣಿಗೆ ಕಾಣಿಸುತ್ತಿಲ್ಲ. ದೊಡ್ಡ ಕಾರುಗಳ ಮಾರಾಟದಲ್ಲಷ್ಟೇ ಬೆಳವಣಿಗೆ ಇದೆ ಎಂದು ಭಾರ್ಗವ ಅವರು ಸೋಮವಾರ ಹೇಳಿದ್ದಾರೆ.

ಆಟೊಮೊಬೈಲ್ ಉದ್ಯಮದ ಮೇಲೆ ವಿಧಿಸುತ್ತಿರುವ ಭಾರಿ ಪ್ರಮಾಣದ ತೆರಿಗೆಯು ಉದ್ಯಮದ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ ಎಂದು ಅವರು ಕಿಡಿ ಕಾರಿದ್ದಾರೆ.