ಆರನೇ ವಯಸ್ಸಲ್ಲೇ ಡಾಕ್ಟರೇಟ್ ಪಡೆದ ಪುಟ್ಟ ಪೋರಿ

 ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಗಳೇ ಮೊದಲ ಗುರುಗಳು ಅನ್ನುವ ಮಾತಿಗೆ ಧಾರವಾಡ ಕುಂದಗೋಳ ತಾಲೂಕಿನ ಪುಟ್ಟ ಪೊರಿ ಸಾಕ್ಷಿಯಾಗಿದ್ದಾಳೆ. ಈಕೆಯ ಹೆಸರು ಶ್ರೀಶಾ ಮುದಗನ್ನವರ. ತನ್ನ ಬುದ್ಧಿಶಕ್ತಿಯಿಂದ ಕುಂದಗೋಳ ಜನತೆ ಸೇರಿದಂತೆ ರಾಜ್ಯದ ಗಡಿಯಾಚೆಯ ಜನರ ಗಮನ ಸೆಳೆದಿರುವ ಈಕೆ sಸೌಮ್ಯ ಡಾ. ರಾಜಕುಮಾರ ನಟನೆಯ 200 ಕ್ಕೂ ಅಧಿಕ ಸಿನಿಮಾಗಳ ಹೆಸರನ್ನು ಕೇವಲ 3 ನಿಮಿಷಗಳಲ್ಲಿ ಹೇಳ್ತಾಳೆ. ಕೇಳಿದ ಪ್ರಶ್ನೆಗಳಿಗೆ ಥಟ್ಟನೆ ಉತ್ತರ ಕೊಡ್ತಾಳೆ. ಈಶ್ವರ ಮುದಗನ್ನವರ ಹಾಗೂ ಕೀರ್ತಿ ಮುದಗನ್ನವರ ದಂಪತಿಯ ಮಗಳಾದ ಶ್ರೀಶಾ ಮುದಗನ್ನವರ. ತನ್ನ 6 ನೇ ವಯಸ್ಸಿಗೆ ಅಗಾಧ ಸಾಧನೆಯಿಂದ ಡಾಕ್ಟರೇಟ್ ಪಡೆದುಕೊಂಡಿದ್ದಾಳೆ. ನಂಬಲು ಅಸಾಧ್ಯವದರೂ ಸತ್ಯ, ಈಗಾಗಲೇ ಈ ಬಾಲಕಿ ಸಾಕಷ್ಟು ಹಿರಿಮೆ-ಗರಿಮೆಗಳನ್ನ ತಣ್ಣದಾಗಿಸಿಕೊಂಡಿದ್ದು, ಈಕೆಯ ಚಾತುರ್ಯಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್, ಎಕ್ಸಕ್ಲೂಸಿವ್ ವಲ್ಡ್ ರೆಕಾರ್ಡ್, ಕರ್ನಾಟಕ ಅಚಿವರ್ಸ್ ಆಫ್ ಬುಕ್ ರೆಕಾರ್ಡ್, ಪ್ಯೂಚರ್ ಕಲಾಮ್ ಬುಕ್ ಆಫ್ ರೆಕಾರ್ಡ್, ದಿ ಯುನಿವರ್ಸ್ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ಅಷೆ ಅಲ್ಲದೆ ಇತ್ತೀಚಿಗೆ ತಮಿಳುನಾಡು ಮೂಲದ ದಿ ಯುನಿವರ್ಸಲ್ ತಮಿಳು ಯುನಿವರ್ಸಿಟಿಯಿಂದ ಡಾಕ್ಟರೇಟ್ ಪಧವಿ ಪಡೆಯುವದರ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.