ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣ: ಮೂವರು ಯುವತಿಯರು ಸೇರಿ ನಾಲ್ವರ ಬಂಧನ
ಬೆಳಗಾವಿ: ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ಪೊಲೀಸರಿಂದ ಭರ್ಜರಿ ಭೇಟೆ ನಡೆದಿದ್ದು, ಯುವತಿಯರು ಸೇರಿ ಮತ್ತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸುವ ಮೂಲಕ ಬಂಧಿತರ ಸಂಖ್ಯೆ 45 ಕ್ಕೆ ಏರಿಕೆಯಾಗಿದೆ.
ಗೋಕಾಕ ತಾಲೂಕಿನ ಮರಡಿಮಠದ ವೈಷ್ಣವಿ ಸನದಿ (21), ಉಪ್ಪಾರಟ್ಟಿಯ ಸುಧಾರಣೆ ಅರಭಾವಿ ( 24), ತುಕ್ಕಾನಟ್ಟಿಯ ಐಶ್ವರ್ಯ ಬಾಗೇವಾಡಿ, ಬಗರನಾಳ ಗ್ರಾಮದ ಬಸವರಾಜ್ ಹಾವಡಿ( 27) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳು 2022ರ ಅಗಸ್ಟ್7 ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋ ಚಿಪ್ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದರು. ಬಂಧಿತರಿಂದ ಮೈಕ್ರೋ ಚಿಪ್, ಇಲೆಕ್ಟ್ರಾನಿಕ್ ಡಿವೈಸ್ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. (ದಿಗ್ವಿಜಯ ನ್ಯೂಸ್)