ಕೆಳ ಹಂತದ ಪೊಲೀಸ್ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪ: ವಿಧಾನಸೌಧ ಭದ್ರತಾ ವಿಭಾಗ ಡಿಸಿಪಿ ಎತ್ತಂಗಡಿ
ಬೆಂಗಳೂರು: ವಿಧಾನಸೌಧ ಭದ್ರತಾ ವಿಭಾಗದ ಪೊಲೀಸರಿಗೆ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ್ ಸೇರಿದಂತೆ 7 ಸಶಸ ಅಧೀಕ್ಷಕರನ್ನು ವರ್ಗಾವಣೆ ಮಾಡಿ ಗೃಹ ಇಲಾಖೆ ಮಂಗಳವಾರ ಆದೇಶಿಸಿದೆ.
ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ್ ವಿರುದ್ಧ ವಿಧಾನಸೌಧ ಭದ್ರತ ವಿಭಾಗದ ಪೊಲೀಸ್ ಅಧಿಕಾರಿ, ಸಿಬ್ಬಂದಿ ರಾಷ್ಟ್ರಪತಿಗೆ ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ್ದರು.
ಅದೇ ವೇಳೆ ಶಿವರಾಜು-ಕೆಎಆರ್‌ಪಿ ಮೌಂಟೆಂಡ್ ಕಂಪನಿ (ಹಾಸನ), ಎಂ.ಜಿ. ನಾಗರಾಜು-ಪಿಟಿಎಸ್ (ಹಾಸನ), ಎ. ಮಾರುತಿ- ಸಿಎಆರ್ (ಮೈಸೂರು ನಗರ), ಚನ್ನವೀರಪ್ಪ ಬಿ.ಹಡಪ್ಪದ್- ವಿಧಾನಸೌಧ ಭದ್ರತೆ, ಮಹದೇವಪ್ಪ ಮಾರುತಿ ಯಾದವಾಡ- ಪಿಟಿಎಸ್ (ಧಾರವಾಡ), ಪಿ. ಉಮೇಶ್-ಸಿಎಆರ್ (ಮಂಗಳೂರು ನಗರ)ಕ್ಕೆ ವರ್ಗಾವಣೆ ಮಾಡಲಾಗಿದೆ.