ತಂಡದ ಹೀನಾಯ ಸೋಲಿಗೆ ನಾಯಕ ರೋಹಿತ್ ಶರ್ಮಾ ದೂರಿದ್ದು ಯಾರನ್ನು ಗೊತ್ತೇ?

ತಂಡದ ಹೀನಾಯ ಸೋಲಿಗೆ ನಾಯಕ ರೋಹಿತ್ ಶರ್ಮಾ ದೂರಿದ್ದು ಯಾರನ್ನು ಗೊತ್ತೇ?
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕ ಮಾತನಾಡಿದ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಈ ಸೋಲಿಗೆ ಕಾರಣ ಏನು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಭಾರತ (India vs Australia) 5 ವಿಕೆಟ್​ಗಳಿಂದ ಗೆದ್ದು ಬೀಗಿತ್ತು.

ಬ್ಯಾಟಿಂಗ್ - ಬೌಲಿಂಗ್​ನಲ್ಲಿ ಉತ್ತಮ ಆಟವಾಡಿತ್ತು. ಆದರೆ, ದ್ವಿತೀಯ ಏಕದಿನದಲ್ಲಿ ನಡೆದಿದ್ದು ಇದರ ತದ್ವಿರುದ್ದ. ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ(Team India) 10 ವಿಕೆಟ್​ಗಳ ಸೋಲು ಅನುಭವಿಸಿತು. ಬ್ಯಾಟಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರೆ, ಬೌಲಿಂಗ್​ನಲ್ಲಿ ಎದುರಾಳಿಯ ಒಂದೂ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಹೀನಾಯ ಸೋಲಿಗೆ ಕಾರಣ ಏನು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

'ಒಂದು ಪಂದ್ಯವನ್ನು ಸೋತರೆ ಖಂಡಿತವಾಗಿಯೂ ಬೇಸರವಾಗುತ್ತದೆ. ಬ್ಯಾಟಿಂಗ್​ನಲ್ಲಿ ನಾವು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ಬೋರ್ಡ್​ನಲ್ಲಿ ಇನ್ನಷ್ಟು ರನ್​ಗಳು ಬೇಕಾಗಿದ್ದವು. ಇದು 117 ರನ್​ಗೆ ಆಲೌಟ್ ಆಗುವ ವಿಕೆಟ್ ಅಲ್ಲವೇ ಅಲ್ಲ. ಸರಾಗವಾಗಿ ವಿಕೆಟ್​ಗಳನ್ನು ಕಳೆದುಕೊಳ್ಳುತ್ತಿದ್ದರಿಂದ ನಾವು ಅಂದುಕೊಂಡಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ'.

'ಮೊದಲ ಓವರ್​ನಲ್ಲೇ ಶುಭ್​ಮನ್ ಗಿಲ್ ವಿಕೆಟ್ ಕಳೆದುಕೊಂಡೆವು. ನಾನು ಮತ್ತು ಕೊಹ್ಲಿ 30-35 ರನ್ ಬೇಗ ಗಳಿಸಿದೆವು. ನಂತರ ನಾನು ಔಟಾದೆ. ಬಳಿಕ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡು ಸಾಗಿದೆವು. ಇದು ನಮ್ಮನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ಯಿತು,' ಎಂದು ಹೇಳುವ ಮೂಲಕ ಬ್ಯಾಟರ್​ಗಳೇ ಈ ಪಂದ್ಯ ಸೋಲಲು ಮುಖ್ಯ ಕಾರಣ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.