ಆಟೋ ರಿಕ್ಷಾ ಹುಡುಕಲು ಸಹಾಯ ಮಾಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ
ಪನ್ವೇಲ್(ಮಹಾರಾಷ್ಟ್ರ): ಆಟೋ ರಿಕ್ಷಾವನ್ನು ಹುಡುಕಲು ಸಹಾಯ ಮಾಡುವ ನೆಪದಲ್ಲಿ 20 ವರ್ಷದ ಮಹಿಳೆ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರವೆಸಗಿರುವ ಘಟನೆ ಶನಿವಾರ ರಾತ್ರಿ ಪನ್ವೇಲ್‌ನಲ್ಲಿ ನಡೆದಿದೆ.
ಬಾರ್‌ನಲ್ಲಿ ಕೆಲಸ ಮಾಡುವ ಮಹಿಳೆ ಮಧ್ಯರಾತ್ರಿ ಆಟೋಗಾಗಿ ಕಾಯುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಆಕೆಯ ಬಳಿಗೆ ಬಂದು ಆಟೋ ಹುಡುಕಲು ಸಹಾಯ ಮಾಡುವುದಾಗಿ ಹೇಳಿದರು.
ಹೀಗಾಗಿ, ಆಕೆ ಅವರೊಂದಿಗೆ ಆಟೋ ಹುಡುಕಲು ಪ್ರಾರಂಭಿಸಿದಳು. ಇದೇ ವೇಳೆ, ಆಕೆಯನ್ನು ಬಲವಂತವಾಗಿ ಖಾಲಿಯಿದ್ದ ಕಟ್ಟಡಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ. ಈ ಸಂಬಂದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವನಿಗಾಗಿ ಹುಡುಕಾಟ ನಡೆಸಿದ್ದಾರೆ