ವಡೋದರಾದಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಐವರ ದುರ್ಮರಣ

ವಡೋದರಾದಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಐವರ ದುರ್ಮರಣ

ಡೋದರಾ: ಪದ್ರಾ ರಸ್ತೆಯ ನಾರಾಯಣವಾಡಿ ಬಳಿ ಗುರುವಾರ ತಡರಾತ್ರಿ ಆಟೋ ರಿಕ್ಷಾಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು. ಆರು ಮಂದಿ ಪ್ರಯಾಣಿಕರಿದ್ದ ಆಟೋ ರಿಕ್ಷಾಕ್ಕೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಮೃತರನ್ನು ಅರವಿಂದ್ ನಾಯಕ್ (28), ಅವರ ಪತ್ನಿ ಕಾಜಲ್ (25), ಮಗ ಗಣೇಶ್ (5), ಮಗಳು ದೃಷ್ಟಿ ಮತ್ತು ಸೊಸೆ ಶಿವಾನಿ (12) ಎಂದು ಗುರುತಿಸಲಾಗಿದೆ. ಸಂತ್ರಸ್ತರು, ಪಾದ್ರಾದ ಎಲ್ಲಾ ನಿವಾಸಿಗಳಶಗಿದ್ದು, ಮದುವೆಯೊಂದಕ್ಕೆ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ಕಾರು ಚಾಲಕ ಜೈಹಿಂದ್ ಯಾದವ್ ರೈಲು ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಬಂಧಿಸಿದ್ದಾರೆ.