ಹಾಸನದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ವೃದ್ಧೆಯ ಚಿನ್ನದ ಸರ ಖದೀಮರು
ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಸಂತೆಮರೂರಿನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು ಅಂಗಡಿಯಲ್ಲಿದ್ದ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಸಾವಿತ್ರ ಮಣಿ ಸರ ಕಳೆದುಕೊಂಡ ವೃದ್ಧೆ. ಸಂತೆಮರೂರು-ಅರಕಲಗೂಡು ಮಾರ್ಗದ ರಸ್ತೆ ಬದಿ ಸಾವಿತ್ರ ಮಣಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು ಸಿಗರೇಟ್, ಲೇಸ್, ಜ್ಯೂಸ್ ಖರೀದಿಸಿದ್ದಾರೆ. ನಂತರ ವೃದ್ದೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದಿಯಲು ವೃದ್ದೆಯ ಕುತ್ತಿಗೆಗೆ ಕಳ್ಳರು ಕೈ ಹಾಕಿದ್ದಾರೆ.
ಕೂಡಲೇ ಸಾವಿತ್ರಮಣಿ ಚಿನ್ನದ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಸರಗಳ್ಳರ ಕೈಗೆ ಅರ್ಧ ಚಿನ್ನದ ಸರ ಮಾತ್ರ ಸಿಕ್ಕಿದೆ. 45 ಗ್ರಾಂ ಚಿನ್ನದ ಸರದಲ್ಲಿ ಅರ್ಧ ಸರವನ್ನು ಕಸಿದು ಕಳ್ಳರು ಪರಾರಿಯಾಗಿದ್ದಾರೆ. ಇದೀಗ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ