ಪರ್ಕಳ: ಅಪರೂಪದ ಹಾರುವ ಹಾವು ಪತ್ತೆ
ಉಡುಪಿ: ಪರ್ಕಳದ ಮಾರ್ಕೆಟ್ ಬಳಿ ನಗರಸಭೆಗೆ ಸೇರಿದ ಕಟ್ಟಡದ ಬಳಿ ಹಾರುವ ಹಾವು ಪತ್ತೆಯಾಗಿದ್ದು ಎಲ್ಲರ ಗಮನ ಸೆಳೆಯಿತು.
ಎರಡೂವರೆ ಅಡಿ ಉದ್ದದ ಹಾವಿನ ಮೈಮೇಲೆ ಕಪ್ಪು ಬಿಳಿ ಹಾಗೂ ಕೆಂಪು ಗೆರೆಗಳಿದ್ದು ಸ್ಥಳೀಯರು ವಿಷಪೂರಿತ ಹಾವು ಎಂದು ಆತಂಕಗೊಂಡಿದ್ದರು.
ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರನ್ನು ಸಂಪರ್ಕಿಸಿದಾಗ ಇದು ವಿಷ ರಹಿತ ಹಾವಾಗಿದ್ದು, ಹಾರುವ ಹಾವು. ತುಳುಬಾಷೆಯಲ್ಲಿ ಪುಲ್ಲಿ ಪುತ್ರ ಎಂದು ಕರೆಯಲಾಗುತ್ತದೆ. ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂಬ ಮಾಹಿತಿ ನೀಡಿದರು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.