ದಾವಣಗೆರೆಯಲ್ಲಿ ಗಂಧದ ಗುಡಿ ಚಿತ್ರ ಬಿಡುಗಡೆ ; 5 ಸಾವಿರ ಸಸಿ ವಿತರಣೆ

ದಾವಣಗೆರೆಯಲ್ಲಿ ಗಂಧದ ಗುಡಿ ಚಿತ್ರ ಬಿಡುಗಡೆ ; 5 ಸಾವಿರ ಸಸಿ ವಿತರಣೆ

ದಾವಣಗೆರೆ,(ಅ.28) : ಪವರ್ ಸ್ಟಾರ್, ಅಭಿಮಾನಿಗಳ ಪಾಲಿನ ಅಪ್ಪು ಪುನೀತ್ ರಾಜ್ ಕುಮಾರ್(Puneet Rajkumar) ಅವರ ಬಹುನಿರೀಕ್ಷಿತ ಸಾಕ್ಷ್ಯಚಿತ್ರ ಗಂಧದ ಗುಡಿ ಇಂದು ತೆರೆಕಂಡಿದ್ದು, ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ದಾವಣಗೆರೆ ನಗರದ ವಸಂತ ಥೀಯಟರ್ ಬಳಿ ಜಮಾಯಿಸಿದ ಅಭಿಮಾನಿಗಳು, ಥಿಯೇಟರ್ ಗೆ ಬಾಳೆ ಕಂದು, ಮಾವಿನ ತೋರಣ ಕಟ್ಟಿ ಹೂವು ಮತ್ತು ವಿದ್ಯುತ್ ದೀಪಲಂಕಾರದಿಂದ ಸಿಂಗರಿಸಿ ಸಂಭ್ರಮಿಸಿದರು.

ಥಿಯೇಟರ್ ಆವರಣದಲ್ಲಿ ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ಕಟೌಟ್ ಗೆ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿ, ಕೇಕ್ ಕಟ್ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು. ಅಪ್ಪು ತೆರೆ ಮೇಲೆ ಕಾಣುತ್ತಿದ್ದಂತೆ, ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಮನು ಎಂಬ ಅಭಿಮಾನಿಯೋರ್ವ ಎದೆಯ ಮೇಲೆ ಅಪ್ಪು ಹಾಗೂ ರಾಜ್ ಕುಮಾರ್ ಟ್ಯಾಟ್ಯೂ ಹಾಕಿಸಿಕೊಂಡ ಅಭಿಮಾನಿ ಮೆರೆದರು. ಈ ಸಂದರ್ಭದಲ್ಲಿ 5 ಸಾವಿರ ಸಸಿ ವಿತರಣೆ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನ ತೋರಿದರು.

ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಅಪ್ಪು ಕಟೌಟ್ ಗೆ ಕ್ಷೀರಾಭಿಷೇಕ ಮಾಡುವುದು, ಕೇಕ್ ಕತ್ತರಿಸಿ, ಸಿಹಿ ಹಂಚುವುದು ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸುವುದು ಸಾಮಾನ್ಯವಾಗಿತ್ತು.