ಊಟ ಸರಿಂಯಾಗಿ ಕೊಡದಿದ್ದರೆ ನನಗೆ ಪತ್ರ ಬರೆಯಿರಿ ಶಾಸಕ | Koppal |
ಊಟ ಸರಿಂಯಾಗಿ ಕೊಡದಿದ್ದರೆ ನನಗೆ ಪತ್ರ ಬರೆಯಬೇಕು ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಭಯ್ಯಾಪೂರ ಅವರು ಮಕ್ಕಳಿಗೆ ತಿಳಿಸಿದರು. ನಿನ್ನೆ ವಿಷ ಆಹಾರ ಸೇವಿಸಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದ ಘಟನೆ ಕುಷ್ಟಗಿ ತಾಲೂಕಿನ ನಿಡಶೇಸಿ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಈ ವೇಳೆಯಲ್ಲಿ ಸರಿಯಾಗಿ ಊಟ ನೀಡದಿದ್ದರೆ ನನಗೆ ಪತ್ರ ಬರೆಯಬೇಕೆಂದು ವಿದ್ಯಾರ್ಥಿ ವರುಣ್ ಗೆ ಸೂಚಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸಿದರು.