ಆ.೨೭-೨೯ರ ವರೆಗೆ ಬೆಳಗಾವಿ ಕೆಎಸ್ ಆರ್ ಎಲ್ ಕಾನೂನು ಕಾಲೇಜಲ್ಲಿ ಅಖಿಲ ಭಾರತ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ

ಆ.೨೭-೨೯ರ ವರೆಗೆ ಬೆಳಗಾವಿ ಕೆಎಸ್ ಆರ್ ಎಲ್ ಕಾನೂನು ಕಾಲೇಜಲ್ಲಿ ಅಖಿಲ ಭಾರತ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ
ಬೆಳಗಾವಿ :ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾ ವಿದ್ಯಾಲಯ ಅಖಿಲ ಭಾರತ ಮಟ್ಟದ ೧೧ ನೇ ಎಂ.ಕೆ.ನAಬಿಯಾರ್ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಆನ್ಲೈನ್ ಮುಖಾಂತರ ಆಗಸ್ಟ್ ೨೭ ರಿಂದ ೨೯ರ ವರೆಗೆ ಅಯೋಜಿಸಲಾಗಿದೆ.
ಬುಧವಾರ ಮಹಾವಿದ್ಯಾಲಯದಲ್ಲಿ ಆಡಳಿತ ಮಂಡಳಿ ಚೇರಮನ್ ಅಡ್ವೋಕೇಟ್ ಎಸ್.ವಿ.ಗಣಾಚಾರಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭಾರತದ ಆಟಾರ್ನಿ ಜನರಲ್ ಪದ್ಮಭೂಷಣ ಕೆ. ಕೆ. ವೇಣುಗೋಪಾಲ ಈ ಸ್ಪರ್ಧೆಯ ಮಹಾಪೋಷಕರಾಗಿದ್ದಾರೆ. ಈ ಸ್ಪರ್ಧೆಯನ್ನು ತಮ್ಮ ತಂದೆ ಹಾಗೂ ಸ್ವತಂತ್ರ ಪೂರ್ವ ಭಾರತದ ಹಿರಿಯ ವಕೀಲ ಎಂ. ಕೆ. ನಂಬಿಯಾರ್ ಅವರ ಹೆಸರಿನಲ್ಲಿ ನಡೆಸುವಂತೆ ಅವರು ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಕೆ. ಕೆ. ವೇಣುಗೋಪಾಲ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾ ವಿದ್ಯಾಲಯದ ಹೆಮ್ಮೆಯ ಮಾಜಿ ವಿದ್ಯಾರ್ಥಿಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತದ ಐದು ರಾಜ್ಯಗಳಿಂದ ೧೨ ಕಾನೂನು ವಿದ್ಯಾರ್ಥಿ ತಂಡಗಳು ಭಾಗವಹಿಸಲಿವೆ. ಈ ವರ್ಷ ಕೋವಿಡ್ ಮಹಾಮಾರಿಯ ಕಾರಣದಿಂದಾಗಿ ಇದನ್ನು ಆನ್ಲೈನ್ ಮುಖಾಂತರ ಆಯೋಜಿಸಲಾಗಿದೆ. ಸುಮಾರು ೩೦ಕ್ಕೂ ಹೆಚ್ಚು ವಕೀಲರು ಹಾಗೂ ಕಾನೂನು ಪ್ರಾಧ್ಯಾಪಕರು ಈ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಸ್ಪರ್ಧೆಯ ವಿವಿಧ ವಿಭಾಗ ಗಳಲ್ಲಿ ಬಹುಮಾನ ನೀಡಲಾಗುವುದು. ಒಟ್ಟು ಬಹುಮಾನದ ಮೊತ್ತ ಸುಮಾರು. ೮೦,೦೦೦ ರೂಪಾಯಿ. ಹಿರಿಯ ವಕೀಲರಾದ ಅಶೋಕ್ ಪೋತದಾರ ಹೆಸರಿನಲ್ಲಿ ೫,೦೦೦ ರೂಪಾಯಿ ಶ್ರೇಷ್ಠ ಅಣಕು ವಕೀಲ ಪ್ರಶಸ್ತಿ ನೀಡಲಾಗುವುದು ಎಂದು ಮಾಹಿತಿ ನಿಡಿದರು.
ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ ೨೭ ಸಂಜೆ ೪:೩೦ ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಕೀಲರು ಹಾಗೂ ಸೊಸೈಟಿ ಅಧ್ಯಕ್ಷರಾದ ಪಿ. ಎಸ್. ಸಾವಕಾರ, ಮುಖ್ಯ ಅತಿಥಿ ಯಾಗಿ ಭಾಗವಹಿಸುವರು. ಬೆಳಗಾವಿ ಉಪ ಪೊಲೀಸ್ ಆಯುಕ್ತರು ಡಾ. ವಿಕ್ರಮ ಅಮಠೆ ವಿಶೇಷ ಅತಿಥಿಯಾಗಿ ಭಾಗವಹಿಸುವರು. ವಕೀಲರು ಹಾಗೂ ಕಾನೂನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್. ವಿ. ಗಣಾಚಾರಿ, ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರೋಪ ಆಗಸ್ಟ್ ೨೯, ಸಂಜೆ ೫ ಗಂಟೆಗೆ ನಡೆಯಲಿದೆ. ಬೆಂಗಳೂರಿನ ಪಿಎಎಸ್ ವಿಶ್ವ ವಿದ್ಯಾಲಯದ ಡೀನ್ ಡೀನ್ ಡಾ. ಸಂದೀಪ ದೇಸಾಯಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕಾನೂನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್. ವಿ. ಗಣಾಚಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪ್ರಾಚಾರ್ಯ ಡಾ. ಎ.ಎಚ್.ಹವಾಲ್ದಾರ್, ಅಸಿಸ್ಟಂಟ್ ಪ್ರೊಫೆಸರ್ ಅಶ್ವಿನಿ ಪರಬ್ ಹಾಗೂ ಪ್ರೊ. ವಾಘ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.