ಸಿಡಿ ಕೇಸ್ನಲ್ಲಿ `ಮಹಾನಾಯಕ'ನ ಕೈವಾಡ ಇರುವ ಸಾಕ್ಷ್ಯ ಇದೆ : ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಸಿಡಿ ಕೇಸ್ನಲ್ಲಿ `ಮಹಾನಾಯಕ'ನ ಕೈವಾಡ ಇರುವ ಸಾಕ್ಷ್ಯ ಇದೆ : ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ : ಸಿಡಿ ಪ್ರಕರಣದಲ್ಲಿ ಮಹಾನಾಯಕನ ಕೈವಾಡವಿರುವ ಸಾಕ್ಷ್ಯ ಇದ್ದು, ಶೀಘ್ರವೇ ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಗೆ ನನ್ನ ಒಬ್ಬನ ಹೆದರಿಕೆ ಇದೆ. ನಾನೊಬ್ಬನೇ ಅವನನ್ನ ಎದುರಿಸುವವ. ಇಂತಹ ನೂರು ಸಿಡಿ ಬರಲಿ ನಾನು ಗಟ್ಟಿ ಇದ್ದೇನೆ. ನನ್ನ ಕೇಸ್ ಬಿಡುವುದಿಲ್ಲ ಸಿಬಿಐಗೆ ಕೊಡಿಸುತ್ತೇನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡಿಸುತ್ತೇನೆ. ಸಿಡಿ ಕೇಸ್​ನಲ್ಲಿ ಮಹಾನಾಯಕನ ಕೈವಾಡ ಇರುವ ಸಾಕ್ಷ್ಯ ಇದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಜೊತೆ ಚರ್ಚಿಸಿದ್ದೇನೆ. ಸಿಡಿ ಕೇಸ್​ನ ಇಬ್ಬರು ಆರೋಪಿಗಳು ಶಿರಾ, ದೇವನಹಳ್ಳಿಯವರು. ದೇವನಹಳ್ಳಿಯವನ ಮನೆ ಮೇಲೆ ದಾಳಿಯಾದಾಗ 100 ಕ್ಕೂ ಹೆಚ್ಚು ಸಿಡಿಗಳು ಸಿಕ್ಕಿವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.