ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ
ಬೆಂಗಳೂರು: BMTC ಬಸ್‌ಗೆ ಬಾಲಕಿ ಬಲಿಯಾದ ಘಟನೆ ಟಿ.ಸಿ. ಪಾಳ್ಯಯಿಂದ ಬಟ್ಟರಹಳ್ಳಿ ಮಾರ್ಗದಲ್ಲಿ ನಡೆದಿದೆ. ಪ್ರಿಯದರ್ಶಿನಿ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ದ್ವಿಚಕ್ರ ವಾಹನದಲ್ಲಿ ಹೋಗಿದ್ದರು. ಈ ವೇಳೆ ಲಾವ್ಯಶ್ರೀ & ಯಾಶ್ವಿನ್ ಹಿಂಬದಿ ಕೂತಿದ್ದರು. ಈ ವೇಳೆ ಬೈಕ್ ಸ್ಕಿಡ್ ಆಗಿದ್ದು ಪ್ರಿಯದರ್ಶಿನಿ & ಯಾಶ್ವಿನ್ ಎಡಗಡೆಗೆ ಬಿದ್ದಿದ್ದಾರೆ. ಲಾವ್ಯಶ್ರೀ ಬಲಗಡೆಗೆ ಬಿದ್ದಿದ್ದಾಳೆ ಈ ಸಂದರ್ಭ ಹಿಂದಿನಿಂದ ಬಸ್ ಲಾವ್ಯಾಳ ಮೇಲೆ ಹರಿದು ಆಕೆ ಮೃತಪಟ್ಟಿದ್ದಾಳೆ.