'ನಮ್ಮ ಮೆಟ್ರೋ' 2ನೇ ಹಂತದ ಯೋಜನೆ: ಬರೋಬ್ಬರಿ 13.90 ಕಿ.ಮೀ ಸುರಂಗ ಕೊರೆದು ಹೊರಬಂದ 'ಲಾವಿ' |
ಬೆಂಗಳೂರು: ಕಳೆದ ಮೇ ನಲ್ಲಿ ಸುರಂಗ ಕೊರೆಯಲು ಆರಂಭಿಸಿದ್ದಂತ ಲಾವಿ ಟಿಬಿಎಂ, ಇಂದು ಬರೋಬ್ಬರಿ 13.90 ಕಿಲೋಮೀಟರ್ ಉದ್ದದ ಸುರಂಗವನ್ನು ಕೊರೆದು ಹೊರಬಂದಿದೆ. ಈ ಮೂಲಕ ನಮ್ಮ ಮೆಟ್ರೋ ( Namma Metro ) 2ನೇ ಹಂತದ ಯೋಜನೆಯ ಕಾಮಗಾರಿ ತ್ವರಿತವಾಗಿ ನಡೆಯಲು ಅನುವು ಮಾಡಿಕೊಟ್ಟಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಮೆಟ್ರೋ ರೈಲು ನಿಗಮವು, ದಿನಾಂಕ 26-05-2022ರಂದು ಮೆಟ್ರೋ ಯೋಜನೆಯ ಹಂತ-2ರ ಭಾಗವಾಗಿ ರೀಚ್-6 ಮಾರ್ಗದಲ್ಲಿ ಸುರಂಗ ಕೊರೆಯುವ ಯಂತ್ರ ಲಾವಿ, ಕಾರ್ಯ ಆರಂಭಿಸಿತ್ತು ಎಂದಿದೆ.
ಎಂ.ಜಿ ರಸ್ತೆಯಿಂದ ಸುರಂಗ ಕಾಮಗಾರಿಯನ್ನು ಆರಂಭಿಸಿದ್ದಂತ ಸುರಂಗ ಕೊರೆಯುವ ಯಂತ್ರವು, ಇಂದು ಬರೋಬ್ಬರಿ 13.90 ಕಿಲೋ ಮೀಟರ್ ಅಂದರೇ 1134 ಮೀಟರ್ ಉದ್ದದ ಸುರಂಕವನ್ನು ಕೊರೆದು, ರಾಷ್ಟ್ರೀಯ ಮಿಲಿಟರಿ ಶಾಲೆ ನಿಲ್ದಾಣದ ಬಳಿಯಲ್ಲಿ ಹೊರ ಬಂದಿದೆ. ಈ ಮೂಲಕ ಈವರೆಗೆ 15,210 ಮೀಟರ್ ಸುರಂಗ ಕೊರೆಯಲಾಗಿದೆ ಎಂದು ಮಾಹಿತಿ ನೀಡಿದೆ.
ಅಂದಹಾಗೆ ನಮ್ಮ ಮೆಟ್ರೋ 2ನೇ ಯೋಜನೆ ಹಂತದಲ್ಲಿ ಒಟ್ಟು 9 ಸುರಂಗ ಮಾರ್ಗವನ್ನು ಕೊರೆಯಲಾಗುತ್ತಿದೆ. ಈಗಾಗಲೇ 3 ಟಿಬಿಎಂಗಳಾದ ಊರ್ಜಾ, ವರದ ಮತ್ತು ಅವ್ನಿ ತಮ್ಮ ನಿಗದಿತ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿದ್ದಾವೆ. ಒಟ್ಟು 22,245 ಮೀ ಸುರಂಗ ಮಾರ್ಗ ಕೊರೆಯುವ ಕಾಮಗಾರಿಯಲ್ಲಿ ಈವರೆಗೆ 15,210 ಮೀ ಪೂರ್ಣಗೊಂಡಿದ್ದು, ಶೇ.70ರಷ್ಟು ಸಾಧನೆ ಮಾಡಲಾಗಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.