ಪತ್ನಿಯ ಆಸೆಯಂತೆ ಆಕೆಯ ಸ್ನೇಹಿತೆಯನ್ನು ಮದ್ವೆಯಾದ ಗಂಡ ಆ ಆಸೆ ಏನೆಂದು ತಿಳಿದ್ರೆ ಹುಬ್ಬೇರಿಸ್ತೀರಾ
ನವದೆಹಲಿ: ಮೊದಲ ಪತ್ನಿ ಬದುಕಿರುವಾಗಲೇ ಇನ್ನೊಂದು ಮದುವೆಯಾದರೆ ಗಂಡನ ಕತೆ ಮುಗಿಯಿತು ಅಂತಾನೇ ಅರ್ಥ. ಇಬ್ಬರು ಹೆಂಡಿರ ಮಧ್ಯೆ ಸಿಲುಕಿ ನಲುಗಬೇಕಾಗುತ್ತದೆ. ಆದರೆ, ಇಲ್ಲೊಬ್ಬ ಮಹಿಳೆ ತನ್ನ ಗಂಡನಿಗೆ ತಾನೇ ಮುಂದೆ ನಿಂತು ಎರಡನೇ ಮದುವೆ ಮಾಡಿಸಿದ್ದಾಳೆ. ಅಚ್ಚರಿ ಎನಿಸಿದರೂ ಇದು ಸತ್ಯ.
ಹೌದು, ಮಹಿಳೆಯೊಬ್ಬಳು ತನ್ನ ಗಂಡನಿಗೆ ತನ್ನ ಸ್ನೇಹಿತೆಯ ಜೊತೆ ಎರಡನೇ ಮದುವೆ ಮಾಡಿಸಿದ್ದಾಳೆ. ಅಷ್ಟಕ್ಕೂ ಆಕೆ ತೆಗೆದುಕೊಂಡ ನಿರ್ಧಾರ ಅವಳ ಬಯಕೆಯಂತೆ. ಇನ್ನೊಂದೆಡೆ ಪತ್ನಿಯನ್ನು ಸಂತೋಷವಾಗಿ ಇಡಲೆಂದೇ ಆಕೆಯ ಸ್ನೇಹಿತೆಯನ್ನು ಎರಡನೇ ಮದುವೆ ಆಗಿದ್ದಾಗಿ ಆತ ಹೇಳಿಕೊಂಡಿದ್ದಾನೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಮೂವರ ನಡುವೆ ನಡೆದಿರುವ ಸಂಭಾಷಣೆ ನೆಟ್ಟಿಗರ ಗಮನ ಸೆಳೆದಿದೆ.
ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿರುವ ವ್ಯಕ್ತಿ ಮೊದಲು ತನ್ನ ಹಿಂದಿರುವ ಮೊದಲ ಪತ್ನಿಯ ಪರಿಚಯ ಮಾಡುತ್ತಾನೆ. ಈಕೆ ನನ್ನ ಪತ್ನಿ ಎಂದು ಹೇಳುತ್ತಾನೆ. ಬಳಿಕ ನಿನ್ನ ಬಯಕೆ ಏನು ಎಂದು ಪತ್ನಿಯನ್ನು ಪ್ರಶ್ನೆ ಮಾಡುತ್ತಾನೆ.
ಇದಕ್ಕೆ ಉತ್ತರಿಸುವ ಪತ್ನಿ ನನ್ನ ಫ್ರೆಂಡ್ ಜೊತೆ ನಾನು ಹೆಚ್ಚಿಗೆ ಸಮಯ ಕಳೆಯಬೇಕೆಂದು ಕೇಳುತ್ತಾಳೆ. ಇದಕ್ಕೆ ಮರು ಪ್ರಶ್ನಿಸುವ ಗಂಡ ನಿನ್ನ ಸಮಸ್ಯೆಯನ್ನು ನಾನು ಬಗೆಹರಿಸಿದ್ದೇನೆಯೇ? ಎನ್ನುತ್ತಾನೆ. ಅದಕ್ಕೆ ಪತ್ನಿ ಹೌದು, ನೀನು ಪರಿಹರಿಸಿದ್ದೀಯ ಎನ್ನುತ್ತಾಳೆ.
ಇದಾದ ಬಳಿಕ ಆ ವ್ಯಕ್ತಿ ತನ್ನ ಕ್ಯಾಮೆರಾವನ್ನು ತನ್ನ ಪಕ್ಕದಲ್ಲಿ ಕುಳಿತಿರುವ ಮತ್ತೊಂದು ಮಹಿಳೆಯ ಬಳಿ ತಿರುಗಿಸುತ್ತಾನೆ. ಇವಳೇ ನನ್ನ ಎರಡನೇ ಪತ್ನಿ. ಹೆಸರು ಸಕಿನಾತ್. ನನ್ನ ಮೊದಲ ಪತ್ನಿಯ ಸ್ನೇಹಿತೆ ಎಂದು ಪರಿಚಯಿಸುತ್ತಾನೆ.
ಈ ವೇಳೆ ಮೊದಲ ಪತ್ನಿ ಜವಿಮ್ ಅದು ನಾನಲ್ಲ ಎಂದು ಹೇಳಿದಾಗ ಸುಮ್ಮನೇ ಇರವಂತೆ ಕೊಂಚ ಧ್ವನಿಯೇರಿಸುತ್ತಾನೆ. ಕೊನೆಗೆ ಕ್ಯಾಮೆರಾವನ್ನು ಎರಡನೇ ಪತ್ನಿಯ ಕಡೆ ತಿರುಗಿಸಿ, ನನ್ನ ಕುಟುಂಬಕ್ಕೆ ಸ್ವಾಗತ ಸಕಿನಾತ್ ಎಂದು ಹೇಳುತ್ತಾನೆ. ಈ ವೇಳೆ ಎರಡನೇ ಪತ್ನಿ ನಾಚಿಕೊಳ್ಳುತ್ತಾಳೆ. ಬಳಿಕ ಗುಡ್ಬೈ ಹೇಳುವ ಮೂಲಕ ವಿಡಿಯೋ ಕೊನೆಯಾಗುತ್ತದೆ.
ಈ ವಿಡಿಯೋವನ್ನು ಘರ್ ಕೆ ಕಲೇಶ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಈವರೆಗೂ 10 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ವಿಡಿಯೋ ಅಸಲಿಯತ್ತೇನು ಎಂಬುದು ದೃಢವಾಗಿಲ್ಲ.
ವಿಡಿಯೋ ಮಾತ್ರ ಎಲ್ಲರ ಗಮನ ಸೆಳೆದಿದೆ. ಕೆಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದರೆ, ಇನ್ನು ಕೆಲವರು ಮೊದಲ ಹೆಂಡತಿಯನ್ನು ಈ ರೀತಿ ನಡೆಸಿಕೊಳ್ಳುವುದಕ್ಕಾಗಿ ಮತ್ತು ಅವಳನ್ನು ಮೋಸಗೊಳಿಸಿದ್ದಕ್ಕಾಗಿ ಆತನನ್ನು ನಿಂದಿಸಿದ್ದಾರೆ.