ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಕಾರ್ಯ : 2 ಕೋಟಿಗೂ ಹೆಚ್ಚು ಹಣ ಸಂಗ್ರಹ

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಕಾರ್ಯ : 2 ಕೋಟಿಗೂ ಹೆಚ್ಚು ಹಣ ಸಂಗ್ರಹ

ರಾಯಚೂರು: ಪ್ರಸಿದ್ದ ಗುರುರಾಯರ ಸನ್ನಿಧಿಯಾದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಾರ್ಚ್ ತಿಂಗಳಲ್ಲಿ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಹರಿದು ಬಂದಿದ್ದು, 2 ಕೋಟಿ 11 ಲಕ್ಷ 95 ಸಾವಿರದ 988 ರೂ. ಸಂಗ್ರಹವಾಗಿದೆ.

ರಾಘವೇಂದ್ರ ಸ್ವಾಮಿಗಳ ದರ್ಶಕ್ಕೆ ಭಕ್ತರ ಸಾಗರವೇ ಹರಿದು ಬರುತ್ತದೆ ಈ ನಿಟ್ಟಿನಲ್ಲಿ ಈ ಬಾರಿ ಮುಜರಾಯಿ ಇಲಾಖೆ ಅಧಿಕಾರಿಗಳು, ಗುರುಪಾದ ಕರಸೇವಕರು ಹಾಗೂ ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಕಾಣಿಕೆ ಎಣಿಕೆ ಕಾರ್ಯದಲ್ಲಿ ನಡೆಸಿದ್ದರು

ಈ ಸಂದರ್ಭದಲ್ಲಿ ಈ ಬಾರಿ ಕೋಟಿ 11 ಲಕ್ಷ 95 ಸಾವಿರದ 988 ರೂ. ಕಾಣಿಕೆ ಹರಿದು ಬಂದಿದೆ. ಇದರಲ್ಲಿ 2 ಕೋಟಿ 7 ಲಕ್ಷ 39 ಸಾವಿರದ 68 ರೂ. ನೋಟುಗಳಲ್ಲಿದ್ದು, 4 ಲಕ್ಷ 56 ಸಾವಿರದ 920 ರೂಪಾಯಿ ನಾಣ್ಯಗಳಿದ್ದವು. ಇನ್ನೂ 7 ಗ್ರಾಂ ಚಿನ್ನ, 571 ಗ್ರಾಂ ಬೆಳ್ಳಿಯನ್ನು ಕಾಣಿಕೆ ಸಂಗ್ರಹವಾಗಿದೆ.