ಛತ್ರಪತಿ ಶಿವಾಜಿ ಮಹಾರಾಜರು ಒಂದು ಜಾತಿಗೆ ಸೀಮಿತ ಆಗಿರಲಿಲ್ಲ; ಜಾರಕಿಹೊಳಿ

ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರ ಹೋರಾಟ ನಮಗೆ ಸ್ಪೂರ್ತಿ ಆಗಬೇಕು. ಶಿವಾಜಿ ಮಹಾರಾಜರು ಬಹುಜನ ಸಮಾಜದ ನಾಯಕರಾಗಿದ್ದರು. ಅವರು ಯಾವುದೇ ಒಂದು ಜಾತಿಗೆ ಸೀಮಿತ ಆಗಿರಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಹೊನಗಾ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮೊದಲು ಕರ್ನಾಟಕ ಮಹಾರಾಷ್ಟ್ರ ಅಂತ ಇರಲಿಲ್ಲ. ಬೆಂಗಳೂರಿನವರೆಗೂ ಶಿವಾಜಿ ಮಹಾರಾಜರು ಆಳ್ವಿಕೆ ನಡೆಸಿದ್ದರು ಎಂದರು.