ಜೈಪುರ್-ಗುಜರಾತ್ ಹೋರಾಟ ಟೈ

ಜೈಪುರ್-ಗುಜರಾತ್ ಹೋರಾಟ ಟೈ

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ ನ ಶುಕ್ರವಾರದ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಹೋರಾಟ 51-51 ಅಂಕಗಳಿಂದ ಸಮಬಲದಲ್ಲಿ ಮುಕ್ತಾಯ ಕಂಡಿದೆ. ಜೈಪುರ್ ತಂಡದ ಪರ ಅರ್ಜುನ್ ದೇಶ್ವಾಲ್ ಅತ್ಯಧಿಕ 17 ಅಂಕ ಗಳಿಸಿದರು. ಮತ್ತೋರ್ವ ರೈಡರ್ ರಾಹುಲ್ ಚೌಧರಿ 13 ಅಂಕಗಳ ಕೊಡುಗೆ ನೀಡಿದರು. ಗುಜರಾತ್ ಪರ ರೈಡರ್ ಗಳಾದ ಸೋನು 14 ಅಂಕ ಮತ್ತು ಪ್ರತೀಕ್ ದಹಿಯಾ 12 ಅಂಕ ಗಳಿಸಿದರು.