ಫಿಫಾ ವರ್ಲ್ಡ್ ಕಪ್: ವಿಶ್ವಕಪ್ ಕೂಟದಿಂದ ಹೊರಬಿದ್ದ ಬ್ರೆಜಿಲ್; ಸೆಮಿಗೆ ಕ್ರೊವೇಷಿಯಾ ಲಗ್ಗೆ

ದೋಹಾ: ಫಿಫಾ ವಿಶ್ವಕಪ್ ಪಂದ್ಯಾಟದಲ್ಲಿ ಇನ್ನು 'ಸುಲ್ತಾನ್'ಗಳ ಕಲರವ ಇಲ್ಲ. ಹೌದು ಕ್ವಾರ್ಟರ್ ಫೈನಲ್ ನ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ ಶೂಟೌಟ್ ನಲ್ಲಿ ಗೆದ್ದ ಕ್ರೊವೇಷಿಯಾ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಶೂಟೌಟ್ ನಲ್ಲಿ 4-2ರಿಂದ 2018ರ ರನ್ನರ್ ಅಪ್ ಕ್ರೊವೇಷಿಯಾ 5 ಬಾರಿಯ ಚಾಂಪಿಯನ್ ಬ್ರೆಜಿಲ್ ಅನ್ನು ಸೋಲಿಸಿತು. ಕ್ರೊವೇಷಿಯಾ ತಂಡದ ಡೊಮಿನಿಕ್ ಲಿವಾಕೋವಿಕ್ ಇಂದಿನ ಪಂದ್ಯದ ಹೀರೋ ಎನಿಸಿಕೊಂಡರು.