ದುಡ್ಡಿನ ಮಳೆ ಸುರಿಸುವ ಮೆಕಡೇಮಿಯಾ!

ಒಂದು ಎಕರೆ ಪ್ರದೇಶದಲ್ಲಿ ಕೃಷಿ ಮಾಡಿ ವರ್ಷಕ್ಕೆ ಕೋಟಿ ರೂ.ಗೂ ಅಧಿಕ ಆದಾಯ ಗಳಿಸಬಹುದು. ಇದು ಬೀಜ ಮತ್ತು ಸಸಿ ಎರಡರಿಂದಲೂ ಆದಾಯ ತಂದು ಕೊಡುವ ಮೆಕಡೇಮಿಯಾ ಬೆಳೆಯ ಸಾಮರ್ಥ್ಯ.
ಏನಿದು ಮೆಕಡೇಮಿಯಾ?: ಮೆಕಡೇಮಿಯಾ ಆಸ್ಟ್ರೇಲಿಯನ್ ನಟ್ಸ್ ಎಂದೇ ಪ್ರಸಿದ್ದಿ.
ಮೆಕಡೇಮಿಯಾ ಮಾರುಕಟ್ಟೆ ಮತ್ತು ಬೇಡಿಕೆ: ಮೆಕಡೇಮಿಯಾ ಕೃಷಿ ವಿದೇಶಗಳಲ್ಲಿ ಒಂದು ರೀತಿ ಬಿಸಿನೆಸ್ ಆಗಿದೆ. ಆಸ್ಟ್ರೇಲಿಯಾ, ದಕ್ಷಿಣ, ಆಫ್ರಿಕಾ ದೇಶಗಳು ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಯುರೋಪ್ ದೇಶಗಳು ಸೇರಿ ಹಲವಾರು ರಾಷ್ಟ್ರಗಳಿಗೆ ರಫ್ತು ಮಾಡುತ್ತವೆ. ಇದರಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾ ಮತ್ತು ಕೀನ್ಯಾ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಜಾಗತಿಕ ಮಾರುಕಟ್ಟೆ ವಿಷಯಕ್ಕೆ ಬಂದ್ರೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿರುವುದರಿಂದ ಇದು 2021 ರಿಂದ 2026ರ ಅವಧಿಯಲ್ಲಿ CAGR ಮೌಲ್ಯ 7.5%ರಷ್ಟು ಪ್ರಗತಿಯಾಗಬಹುದೆಂದು ನಿರೀಕ್ಷಿಸಲಾಗಿದೆ. ಇನ್ನು ಭಾರತದ ಮಾರುಕಟ್ಟೆ ನೋಡುವುದಾದ್ರೆ, ಹೆಚ್ಚು ಬೇಡಿಕೆ ಇದೆ. ಆದ್ರೆ ಇಲ್ಲಿ ಈ ಬೆಳೆ ಆರಂಭಿಕ ಹಂತದಲ್ಲಿ ಇರುವುದರಿಂದ ಅಗತ್ಯವಾದಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತ ಸರ್ಕಾರ, ಇಲ್ಲಿಯೇ ಮೆಕಡೇಮಿಯಾ ಹೆಚ್ಚು ಉತ್ಪಾದಿಸುವ ಸಲುವಾಗಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ಈ ಬೆಳೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ರೈತರು ಈ ಕೃಷಿ ಮಾಡಿದ್ರೆ ಉತ್ತಮ ಆದಾಯ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮೆಕಡೇಮಿಯಾ ಕೃಷಿ ಸಾಧ್ಯನಾ?: ವಿಶ್ವದ ಅತ್ಯಂತ ಲಾಭದಾಯಕ ಬೆಳೆಯಾಗಿರುವ ಮೆಕಡೇಮಿಯಾ ಕೃಷಿಯನ್ನು ಪ್ರತಿಯೊಬ್ಬ ರೈತರು ಮಾಡಿ ಉತ್ತಮ ಆದಾಯ ಗಳಿಸಬಹುದು. ಇದನ್ನು ಬೇರೆ ಬೆಳೆಗಳ ಜೊತೆ ಅಂತರ ಬೆಳೆಯಾಗಿ ಕೂಡ ಬೆಳೆಯಬಹುದಾದ್ದರಿಂದ ರೈತರಿಗೆ ಆದಾಯದ ಹೆಚ್ಚುತ್ತೆ. ಆದರೆ ಈ ಕೃಷಿಗೆ ಭೂಮಿ ಸಮತಟ್ಟಾಗಿರಬೇಕು, ಮಣ್ಣು ಕೆಂಪು ಮತ್ತು ಮರಳು ಮಿಶ್ರಿತವಾಗಿರಬೇಕು. ಅತೀ ಹೆಚ್ಚು ಕೋಲ್ಡ್ ವೇದರ್ ಇದಕ್ಕೆ ಸೂಕ್ತವಲ್ಲ. ಆದ್ದರಿಂದ ರೈತರು ಸೂಕ್ತ ಪ್ರದೇಶದಲ್ಲಿ ಈ ಕೃಷಿ ಮಾಡಿದ್ರೆ ಉತ್ತಮ ಆದಾಯ ಗ್ಯಾರಂಟಿ.
ಮೆಕಡೇಮಿಯಾ ಕೃಷಿ ಯಾಕೆ?: ಮೆಕಡೇಮಿಯಾಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲಿಯೂ ನಮ್ಮ ಭಾರತದಲ್ಲಿ ಈಗ ಮೆಕಡೇಮಿಯಾ ಕಾಯಿಗಳಿಗಿಂತ ಅದರ ಸಸಿಗಳಿಗೆ ಬೇಡಿಕೆ ಹೆಚ್ಚು. ಇಷ್ಟೆ ಅಲ್ಲದೇ ಇದು ಫೈಬರ್, ಖನಿಜ, ವಿಟಮಿನ್ ಮತ್ತು ಆರೋಗ್ಯ ಸಂಬಂಧಿ ಪೋ›ಟೀನ್ ಹೊಂದಿದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅನುಕೂಲಗಳು ಹೆಚ್ಚು, ಇದಲ್ಲದೇ, ಈ ಮೆಕಡೇಮಿಯಾವನ್ನು ಮೌಲ್ಯವರ್ಧನೆ ಮಾಡಬಹುದು, ಜೊತೆಗೆ ಸೌಂಧರ್ಯವರ್ಧಕಗಳಿಗೆ ಹೆಚ್ಚು ಬಳಕೆಯಾಗುತ್ತಿದೆ. ಇದರಿಂದ ಇದಕ್ಕೆ ಬೇಡಿಕೆ ಹೆಚ್ಚಿದ್ದು, ರೈತರು ಈ ಬೆಳೆ ಕೃಷಿ ಮಾಡಿ ಉತ್ತಮ ಆದಾಯ ಗಳಿಸಬಹುದು.
ಮೆಕಡೇಮಿಯಾದಿಂದ ಎಷ್ಟು ಆದಾಯ ಗಳಿಕೆ ಸಾಧ್ಯ?: ಯಾವುದೇ ಕೃಷಿ ಮತ್ತು ಬಿಸಿನೆಸ್ ಮಾಡಿದ್ರು ಪ್ರತಿಯೊಬ್ಬರು ಲೆಕ್ಕ ಹಾಕುವುದು ಆದಾಯ ಎಷ್ಟು ಅಂತ. ಮೆಕಡೇಮಿಯಾ ವಿಚಾರಕ್ಕೆ ಬಂದ್ರೆ ರೈತರಿಗೆ ಇದರಿಂದ ಬರುವ ಆದಾಯದ ಮೊತ್ತ ಇತರೆ ಬೆಳೆಗಳಿಗಿಂತ ಹೆಚ್ಚು ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಇದರಲ್ಲಿ ಸಸಿ ಮತ್ತು ಬೀಜ ಎರಡರಿಂದಲೂ ಆದಾಯ ಪಡೆಯಬಹುದು.
ಉದಾಹರಣೆ: ನೀವು 1 ವರ್ಷದ 15 ಸಾವಿರ ಸಸಿಗಳನ್ನು 450 ರೂ.ಗೆ ಮಾರಾಟ ಮಾಡಿದ್ರೆ 67,50,000 ರೂ. ಅದೇ 3 ವರ್ಷದ 500 ಸಸಿಗಳನ್ನು 1500 ರೂ.ಗೆ ಮಾರಾಟ ಮಾಡಿದ್ರೆ 7,50,000 ರೂ. 6 ತಿಂಗಳಿನಿಂದ 1 ವರ್ಷದ 10 ಸಾವಿರ ಸಸಿಯನ್ನು 250 ರೂ.ಗೆ ಮಾರಾಟ ಮಾಡಿದ್ರೆ 25,00,000 ರೂ. 25 ಸಾವಿರ ಸಸಿಗಳನ್ನು ಮಾರಾಟ ಮಾಡಿದ್ರೆ 1 ಕೋಟಿ ಆದಾಯ ಗಳಿಸಬಹುದು. ಇದು ಕೇವಲ ಸಸಿಗಳನ್ನು ಬೆಳೆಸಿ ಮಾರಾಟ ಮಾಡಿದ್ರೆ ಬರುವ ಆದಾಯ. ಅದೇ ಸಸಿಯನ್ನು ತಂದು ನಾಟಿ ಮಾಡಿದ್ರೆ 6 ವರ್ಷಕ್ಕೆ ಸಂಪೂರ್ಣ ಇಳುವರಿ ನೀಡುತ್ತೆ, ಒಂದು ಗಿಡಕ್ಕೆ ಸರಿಸುಮಾರು 20 ಕೆ.ಜಿ ಮೆಕಡೇಮಿಯಾ ಇಳುವರಿ ಪಡೆಯಬಹುದು. ಪ್ರತಿ ಕೆ.ಜಿ ಕನಿಷ್ಠ 5 ಸಾವಿರಕ್ಕೆ ಮಾರಾಟವಾದ್ರೂ 1 ಲಕ್ಷ ರೂ. ಒಂದು ಮರದಿಂದ ಪ್ರತಿ ವರ್ಷಕ್ಕೆ ಆದಾಯ. ನೀವು ಇದನ್ನು 1 ಎಕರೆಯಲ್ಲಿ ಕೃಷಿ ಮಾಡಿದ್ರೆ 350 ಗಿಡಗಳು ಬೇಕಾಗುತ್ತೆ. ಈ ಎಲ್ಲಾ ಗಿಡಗಳಿಂದ ಪ್ರತಿ ವರ್ಷ ಎಷ್ಟು ಆದಾಯ ಗಳಿಸಬಹುದು ಎಂಬುದನ್ನು ನೀವೇ ಲೆಕ್ಕ ಹಾಕಿ.
ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ffreedomನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ - 02262116777
freedom appನಲ್ಲಿ ಮೆಕಡೇಮಿಯಾ ಕೃಷಿ ಕೋರ್ಸ್: ಪ್ರತಿಯೊಬ್ಬ ರೈತರೂ ಕೂಡ ಆರ್ಥಿಕ ಸಬಲರಾಗಬೇಕು ಎಂಬ ಉದ್ದೇಶ ಹೊಂದಿರುವ ffreedom app ಮೆಕಡೇಮಿಯಾ ಕೃಷಿ ಸಂಬಂಧಿಸಿದ್ದಂತೆ ಕೋರ್ಸ್ ಸಿದ್ಧಪಡಿಸಿ ಅನಾವರಣ ಮಾಡುತ್ತಿದೆ. ಹಲವು ವರ್ಷಗಳಿಂದ ಮೆಕಡೇಮಿಯಾ ಕೃಷಿ ಮತ್ತು ಸಸಿಗಳನ್ನು ಮಾರಾಟ ಮಾಡಿ ಕೋಟಿ ರೂ. ಆದಾಯ ಗಳಿಸುತ್ತಿರುವ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಅಯ್ಯನ ಬಾವಿ ಹತ್ತಿರದ ಬಾಲಾಜಿ ನರ್ಸರಿ ಮಂಜುನಾಥ್ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಕೋರ್ಸ್ ಬಗ್ಗೆ ತಿಳಿದುಕೊಳ್ಳಬಹುದು. ಇದರ ಜೊತೆಗೆ ಬಿಸಿನೆಸ್, ಕೃಷಿ ಮತ್ತು ಹಣಕಾಸಿಗೆ ಸಂಬಂಧಿಸಿದ 900ಕ್ಕೂ ಹೆಚ್ಚು ಕೋರ್ಸ್ ವೀಕ್ಷಿಸಬಹುದು. ಇದಕ್ಕೆ ನೀವು ಈಗಲೇ ffreedom app ಡೌನ್ಲೋಡ್ ಮಾಡಿ.
ಕೋರ್ಸ್ನಲ್ಲಿ ಏನೇನಿದೆ?: ಕೋರ್ಸ್ ಮತ್ತು ಮಾರ್ಗದರ್ಶಕರ ಪರಿಚಯ; ಮೆಕಡೇಮಿಯಾ ಕೃಷಿ ಅಂದ್ರೆ ಏನು?; ಮೆಕಡೇಮಿಯಾ ತಳಿ, ಬಂಡವಾಳ, ನೋಂದಣಿ ಮತ್ತು ಸರ್ಕಾರದ ಸೌಲಭ್ಯ; ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ; ಭೂಮಿ ಸಿದ್ಧತೆ ಮತ್ತು ನಾಟಿ ಪ್ರಕ್ರಿಯೆ; ನೀರು, ಗೊಬ್ಬರ ಮತ್ತು ಕಾರ್ವಿುಕರು; ರೋಗ ಮತ್ತು ಕೀಟ ಬಾಧೆ ನಿಯಂತ್ರಣ; ಕಟಾವು ಮತ್ತು ನಂತರದ ಪ್ರಕ್ರಿಯೆ; ಬೇಡಿಕೆ ಮತ್ತು ಮಾರ್ಕೆಟಿಂಗ್; ಯುನಿಟ್ ಎಕನಾಮಿಕ್ಸ್; ಸವಾಲುಗಳು ಮತ್ತು ಕಿವಿಮಾತು.