ಆಸ್ಟ್ರೇಲಿಯ ವಿರುದ್ಧ ಅಪರೂಪದ ಸಾಧನೆ ಮಾಡಿದ ರವೀಂದ್ರ ಜಡೇಜ

ಆಸ್ಟ್ರೇಲಿಯ ವಿರುದ್ಧ ಅಪರೂಪದ ಸಾಧನೆ ಮಾಡಿದ ರವೀಂದ್ರ ಜಡೇಜ

ಹೊಸದಿಲ್ಲಿ: ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ(Ravindra Jadeja) ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಕಬಳಿಸುವುದರೊಂದಿಗೆ ಅಪರೂಪದ ಸಾಧನೆಯನ್ನು ಮಾಡಿದ್ದಾರೆ

ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 3 ನೇ ದಿನದಂದು ರವೀಂದ್ರ ಜಡೇಜ ಏಳು ವಿಕೆಟ್‌ಗಳನ್ನು ಗಳಿಸುವ ಮೂಲಕ ಆಸ್ಟ್ರೇಲಿಯಾವನ್ನು ಕೇವಲ 113 ರನ್‌ಗಳಿಗೆ ಆಲೌಟ್ ಮಾಡಲು ನೆರವಾದರು.

ಮಾತ್ರವಲ್ಲ ದಿನದ ಸ್ಟಾರ್ ಆಗಿ ಹೊರಹೊಮ್ಮಿದರು.

ಆಸ್ಟ್ರೇಲಿಯ ಒಂದು ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿ ದಿನದಾಟ ಆರಂಭಿಸಿತು. ಆದರೆ ಜಡೇಜ ಹಾಗೂ ರವಿಚಂದ್ರನ್ ಅಶ್ವಿನ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಆತಿಥೇಯರು ಸುಸ್ಥಿತಿಯಲ್ಲಿದ್ದಾರೆ. ಜಡೇಜ ಪಡೆದ ಏಳು ವಿಕೆಟ್‌ಗಳಲ್ಲಿ ಐದು ವಿಕೆಟ್ ಗಳನ್ನು ಕ್ಲೀನ್ ಬೌಲ್ಟ್ ಮೂಲಕ ಪಡೆದರು. ಸುಮಾರು 21 ವರ್ಷಗಳ ನಂತರ ಸ್ಪಿನ್ನರ್‌ಯೊಬ್ಬರು ಇಂತಹ ಸಾಧನೆ ಮಾಡಿದ್ದು ಇದೇ ಮೊದಲು.

1992 ರಲ್ಲಿ ಜೋಹಾನ್ಸ್ ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಅವರು ಇನಿಂಗ್ಸ್‌ನಲ್ಲಿ ಐವರು ಬ್ಯಾಟರ್ ಗಳನ್ನು ಕ್ಲೀನ್ ಬೌಲ್ಡ್ ಮಾಡಿದ್ದರು.

ಒಟ್ಟಾರೆ, ಶುಐಬ್ ಅಖ್ತರ್ 2002 ರಲ್ಲಿ ಲಾಹೋರ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಇದೇ ರೀತಿಯ ಸಾಧನೆಯನ್ನು ಮಾಡಿದ್ದರು.

Dailyhunt