ರೈತ ಸಮುದಾಯಕ್ಕೆ ಸಿಎಂ ಬೊಮ್ಮಾಯಿ ಗುಡ್ ನ್ಯೂಸ್ : ರೈತರಿಗೆ ಮೊದಲ ಬಾರಿ `ಜೀವನ ಜ್ಯೋತಿ ಜೀವ ವಿಮೆ!

ಹಾವೇರಿ : ರೈತರಿಗೆ ಇದೇ ಮೊದಲ ಬಾರಿಗೆ ಜೀವನ ಜ್ಯೋತಿ ಜೀವ ವಿಮೆ ಮಾಡುವುದಕ್ಕೆ ಆಯವ್ಯಯದಲ್ಲಿ 180 ಕೋಟಿ ರೂ. ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾಂವಿಯಲ್ಲಿ ಶಿವಾಜಿ ಮಹಾರಾಜನರ 396 ನೇ ಜಯಂತ್ಯೊತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರಸಕ್ತ ಮಂಡನೆ ಮಾಡಿರುವ ಬಜೆಟ್ ನಲ್ಲಿ ರೈತರು, ಎಸ್ ಸಿ, ಎಸ್ ಟಿ ಸೇರಿದಂತೆ ಎಲ್ಲ ವರ್ಗದವರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಲಾಗಿದೆ.
ಪಿಯುಸಿ, ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯ್ತಿ, ಶಾಲಾ ವಿದ್ಯಾರ್ಥಿಗಳಿಗೆ ಪ್ರಸಕ್ತ 1 ಸಾವಿರ ಬಸ್ ಬಿಡಲಾಗುವುದು. ಇದನ್ನು 2 ಸಾವಿರ ಬಸ್ ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.