ಶಿಕಾರಿಪುರದಲ್ಲಿ`BSY' ಮನೆ ಮೇಲೆ ದಾಳಿ ಪ್ರರಕಣ : ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿ ಹೇಳಿದ್ದೇನು

ಶಿಕಾರಿಪುರದಲ್ಲಿ`BSY' ಮನೆ ಮೇಲೆ ದಾಳಿ ಪ್ರರಕಣ : ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿ ಹೇಳಿದ್ದೇನು

ಬೆಂಗಳೂರು : ಬೆಂಗಳೂರು : ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮನೆ ಮೇಲೆ ದಾಳಿ ಪ್ರಕರಣದ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಇಂತಹ ವಾತಾವರಣ ಸೃಷ್ಟಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಮನೆ ಮೇಲೆ ಕಲ್ಲು ಹೊಡೆದಿದ್ದು ಯಾರೆಂದು ಸರ್ಕಾರವೇ ಉತ್ತರ ಕೊಡಬೇಕು. ಮೀಸಲಾತಿ ವಿಚರದಲ್ಲಿ ಸರ್ಕಾರದ ನಿರ್ಧಾರಕ್ಕೆ ನನ್ನ ಬೆಂಬಲವಿಲ್ಲ. ಈ ವಿಚಾರದಲ್ಲಿ ಮುಸ್ಲಿಂ ಸಮುದಾಯದ ತಾಳ್ಮೆ ಮೆಚ್ಚಬೇಕು. ಮುಸ್ಲಿಂ ಸಮುದಾಯ ಪ್ರತಿಭಟನೆ ಮಾಡಿದ್ರೆ ಏನಾಗುತ್ತಿತ್ತು. ಮುಸ್ಲಿಮರು ನ್ಯಾಯಯುತವಾಗ ತಮ್ಮ ಬೇಡಿಕೆ ಈಡೇಸಿಕೊಳ್ಳಬೇಕು.

ಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಅಂತಾ ಬಿಜೆಪಿ, ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆನೀಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಬೆಳವಣಿಗೆ ಕಂಡು ರಾಷ್ಟ್ರೀಯ ಪಕ್ಷದಗಳಾದ ಕಾಂಗ್ರೆಸ್, ಬಿಜೆಪಿ ತಳಮಳಗೊಂಡಿದ್ದಾರೆ. ಕಾಂಗ್ರೆಸ್ ನಾಯಕರೇ 500 ರೂ. ಕೊಟ್ಟು ಜನ ಸೇರಿಸಿದ್ದೀವಿ ಎಂದಿದ್ದರು. ನಾವು ಆ ರೀತಿ ದುಡ್ಡು ಕೊಟ್ಟು ಜನ ಸೇರಿಸಲ್ಲ. ನಮ್ಮ ಗುರಿ 123 ಸ್ಥಾನ ಗೆಲ್ಲುವುದು ಎಂದಿದ್ದಾರೆ.