ಇಂಪ್ಯಾಕ್ಟ್ ಪ್ಲೇಯರ್ ಬಳಸಿದ ಮೊದಲ ನಾಯಕ ಎಂಎಸ್ ಧೋನಿ; ಈತನೇ ಮೊದಲ 'ಇಂಪ್ಯಾಕ್ಟ್ ಪ್ಲೇಯರ್

ಇಂಪ್ಯಾಕ್ಟ್ ಪ್ಲೇಯರ್ ಬಳಸಿದ ಮೊದಲ ನಾಯಕ ಎಂಎಸ್ ಧೋನಿ; ಈತನೇ ಮೊದಲ 'ಇಂಪ್ಯಾಕ್ಟ್ ಪ್ಲೇಯರ್

ಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತುವಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಶುಕ್ರವಾರ, ಮಾರ್ಚ್ 31ರಂದು ನಡೆದ ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಎಂಎಸ್ ಧೋನಿ ನಾಯಕತ್ವದ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಇತಿಹಾಸದಲ್ಲಿ ಮೊದಲ 'ಇಂಪ್ಯಾಕ್ಟ್ ಪ್ಲೇಯರ್' ಆಗುವ ಮೂಲಕ ತುಷಾರ್ ದೇಶಪಾಂಡೆ ಇತಿಹಾಸ ಬರೆದರು. ಇದೇ ವೇಳೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ "ಇಂಪ್ಯಾಕ್ಟ್ ಪ್ಲೇಯರ್' ಬಳಸಿದ ಮೊದಲ ನಾಯಕನಾದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ 2023ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಬಟಿ ರಾಯುಡು ಬದಲಿಗೆ ತುಷಾರ್ ದೇಶಪಾಂಡೆ ಆಡಿದರು.

ಪಂದ್ಯ ಆರಂಭಕ್ಕೂ ಮೊದಲು ಸಿಎಸ್‌ಕೆ ತಂಡಕ್ಕೆ ಹೆಸರಿಸಲಾದ ಐದು ಬದಲಿ ಆಟಗಾರರೆಂದರೆ, ತುಷಾರ್ ದೇಶಪಾಂಡೆ, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಅಜಿಂಕ್ಯ ರಹಾನೆ ಮತ್ತು ನಿಶಾಂತ್ ಸಿಂಧು. ಮತ್ತೊಂದೆಡೆ, ಗುಜರಾತ್ ಟೈಟನ್ಸ್ ತಂಡದಲ್ಲಿ ಬಿ ಸಾಯಿ ಸುದರ್ಶನ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಅಭಿನವ್ ಮನೋಹರ್, ಕೆಎಸ್ ಭರತ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಹೆಸರಿಸಲಾಗುತ್ತು.

ದೇಶೀಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದನ್ನು ಪರೀಕ್ಷಿಸಿದ ನಂತರ, ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಈ ವರ್ಷದ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು ಮತ್ತು ಇದನ್ನು ಬಳಸಿದ ಮೊದಲ ತಂಡ ಚೆನ್ನೈ ಸೂಪರ್ ಕಿಂಗ್ಸ್.

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿರುವ ವೇಗದ ಬೌಲರ್ ತುಷಾರ್ ದೇಶಪಾಂಡೆ 2023ರ ಐಪಿಎಲ್‌ನಲ್ಲಿ ಮೊದಲ ಬದಲಿ ಆಟಗಾರನಾದರು. ಗುಜರಾತ್ ಟೈಟನ್ಸ್ ರನ್ ಚೇಸಿಂಗ್‌ನಲ್ಲಿ ಅಂಬಟಿ ರಾಯುಡು ಬದಲಾಗಿ ಆಡಿ ಬೌಲಿಂಗ್ ಮಾಡಿದರು. ತುಷಾರ್ ದೇಶಪಾಂಡೆ ಅವರನ್ನು 2022ರ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ.ಗೆ ಸಿಎಸ್‌ಕೆ ತಂಡ ಖರೀದಿಸಿತ್ತು. ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ತುಷಾರ್ ದೇಶಪಾಂಡೆ ಆಡಿದ್ದರು.

ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಬದಲಿ ಆಟಗಾರನಾಗಿ ಬಂದು ಬ್ಯಾಟ್ ಮತ್ತು ಬಾಲ್ ಎರಡನ್ನು ಮಾಡಬಹುದಾಗಿದೆ. ಅಂತಿಮ ಆಡುವ 11ರ ಬದಲಾಗಿ ಪ್ರತಿ ತಂಡ 12 ಆಟಗಾರರನ್ನು ಸೂಚಿಸಬಹುದಾಗಿದೆ.

2022ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಪ್ರತಿ ತಂಡಗಳು ಇನ್ನಿಂಗ್ಸ್‌ನ 14ನೇ ಓವರ್‌ಗೆ ಮೊದಲು ತಮ್ಮ ಇಂಪ್ಯಾಕ್ಟ್ ಪ್ಲೇಯರ್‌ನನ್ನು ಆಡಿಸಬೇಕಿತ್ತು, ಆದರೆ ಐಪಿಎಲ್‌ನಲ್ಲಿ ಇನ್ನಿಂಗ್ಸ್‌ನ ಯಾವುದೇ ಹಂತದಲ್ಲಿ ಬದಲಿ ಅಟಗಾರನನ್ನು ಆಡಿಸಬಹುದು. ಅನ್ನು ಪರಿಚಯಿಸಬಹುದು.

ಅಂತಿಮವಾಗಿ, ಐಪಿಎಲ್ 2023ರಲ್ಲಿ ಮೊದಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ತುಷಾರ್ ದೇಶಪಾಂಡೆ ಅವರ ಆಯ್ಕೆಯು ಆಧುನಿಕ ಕ್ರಿಕೆಟ್‌ನಲ್ಲಿ ಆಟಗಾರರ ಪ್ರತಿಭೆಯ ಪ್ರಾಮುಖ್ಯತೆಯನ್ನು ಪ್ರದರ್ಶಿಸುತ್ತದೆ. ಈ ಹೊಸ ಆವಿಷ್ಕಾರದೊಂದಿಗೆ ಬೇರೆ ತಂಡಗಳು ತಮ್ಮ ಪರವಾಗಿ ಪಂದ್ಯವನ್ನು ತಿರುಗಿಸಬಲ್ಲ ವಿಶೇಷ ಆಟಗಾರನನ್ನು ಕರೆತರಲು ಅವಕಾಶವನ್ನು ಹೊಂದಿವೆ.

ಇಂಪ್ಯಾಕ್ಟ್ ಪ್ಲೇಯರ್ ಎಂದರೆ, 'ಇಂಪ್ಯಾಕ್ಟ್ ಪ್ಲೇಯರ್' ನಿಯಮವು ಈಗ ಐಪಿಎಲ್ ಪಂದ್ಯಾವಳಿ ಇತಿಹಾಸದಲ್ಲಿ ಯಾವುದೇ ಹಂತದಲ್ಲಿ ಆಟಗಾರನನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳಲು ತಂಡಗಳಿಗೆ ಅವಕಾಶ ನೀಡುತ್ತದೆ. ಬದಲಿ ಆಟಗಾರನು ಬ್ಯಾಟಿಂಗ್, ಬೌಲ್ ಮತ್ತು ಫೀಲ್ಡಿಂಗ್ ಮಾಡಬಹುದು. ಆದರೆ ನಾಯಕನಾಗಿ ತಂಡವನ್ನು ಮುನ್ನಡೆಸಲು ಸಾಧ್ಯವಿರುವುದಿಲ್ಲ.