ಮತ್ತೊಮ್ಮೆ ಟೀಕೆಗೆ ಗುರಿಯಾದ 'ಏರ್ ಇಂಡಿಯಾ' ; ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕಲ್ಲು ಪತ್ತೆ -ಮಹಿಳೆ ದೂರು

ಮತ್ತೊಮ್ಮೆ ಟೀಕೆಗೆ ಗುರಿಯಾದ 'ಏರ್ ಇಂಡಿಯಾ' ; ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕಲ್ಲು ಪತ್ತೆ -ಮಹಿಳೆ ದೂರು

ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣಗಳಿಂದ ತೀವ್ರ ಟೀಕೆ ಗುರಿಯಾಗಿರುವ ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಸಂಸ್ಥೆ ಮತ್ತೊಂದು ವಿವಾದಕ್ಕೆ ಸಿಲುಕಿದೆ.

ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕಲ್ಲು ಕಂಡು ಬಂದಿರುವ ಘಟನೆ ವರದಿಯಾಗಿದೆ.

ಈ ಬಗ್ಗೆ ಸರ್ವಪ್ರಿಯಾ ಸಾಂಗ್ವಾನ್ ಎಂಬುವವರು ಟ್ವೀಟ್ ಮಾಡಿದ್ದು, ಏರ್ ಇಂಡಿಯಾ 215 ವಿಮಾನದಲ್ಲಿ ತಾವು ಪಡೆದ ಆಹಾರದಲ್ಲಿ ಸಣ್ಣ ಕಲ್ಲಿನ ತುಂಡು ಕಂಡು ಬಂದಿರುವುದಾಗಿ ಫೋಟೋ ಸಮೇತ ದೂರಿದ್ದಾರೆ. 

ಏರ್ ಇಂಡಿಯಾವನ್ನು ಟ್ಯಾಗ್ ಮಾಡಿರುವ ಮಹಿಳೆ , ಕಲ್ಲು ಮುಕ್ತ ಆಹಾರವನ್ನು ಪಡೆಯಲು ನಿಮಗೆ ಸಂಪನ್ಮೂಲಗಳು ಮತ್ತು ಹಣದ ಅಗತ್ಯವಿಲ್ಲ ಏರ್ ಇಂಡಿಯಾ (@airindiain). ಇಂದು AI 215 ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕಲ್ಲು ಸಿಕ್ಕಿದೆ. ಈ ರೀತಿಯ ನಿರ್ಲಕ್ಷ್ಯ ಸ್ವೀಕಾರಾರ್ಹವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಹಲವು ಬಳಕೆದಾರರನ್ನು ಕೆರಳಿಸಿದ್ದು, ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯ ಸೇವೆಗಳ ತೀವ್ರ ನಿರ್ಲಕ್ಷ್ಯಕ್ಕಾಗಿ ಟೀಕಿಸಿದ್ದಾರೆ.