ಇನ್ಮುಂದೆ ಪ್ರಮುಖ ಟೆಕ್ಸ್ಟ್ ಸಂದೇಶಗಳನ್ನು ಹುಡುಕುವುದು ಮತ್ತಷ್ಟು ಸುಲಭ!

ಇನ್ಮುಂದೆ ಪ್ರಮುಖ ಟೆಕ್ಸ್ಟ್ ಸಂದೇಶಗಳನ್ನು ಹುಡುಕುವುದು ಮತ್ತಷ್ಟು ಸುಲಭ!

ಗೂಗಲ್‌ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಹೊಸದಾಗಿ 'ಸ್ಟಾರ್‌' ಎಂಬ ಫೀಚರ್ ಒಂದನ್ನು ಪರಿಚಯಿಸಲಾಗಿದ್ದು, ಈ ವೈಶಿಷ್ಟ್ಯದ ಸಹಾಯದಿಂದ ಅತಿ ಮುಖ್ಯವಾದ ಟೆಕ್ಸ್ಟ್ ಸಂದೇಶಗಳನ್ನು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗಲಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ. ಅತಿ ಮುಖ್ಯವಾದ ಸಂದೇಶಗಳಿಗೆ ಸ್ಟಾರ್‌ ಗುರುತು ಹಾಕುವ ಮೂಲಕ ಪ್ರಮುಖ ಸಂಭಾಷಣೆಗಳನ್ನು ಸುಲಭವಾಗಿ ಇರಿಸಿಕೊಳ್ಳಲು ಹೊಸ 'ಸ್ಟಾರ್‌' ವೈಶಿಷ್ಟ್ಯವು ಸಹಾಯ ಮಾಡಲಿದೆ. ಇದರಿಂದ ಬೇಕಾದ ಮೆಸೇಜ್‌ ಅನ್ನು ಕ್ಷಣಮಾತ್ರದಲ್ಲಿ ಪತ್ತೆ ಮಾಡಬಹುದು ಎಂದು ಗೂಗಲ್ ಹೇಳಿದೆ.