ಶ್ರೀಮತಿ ಬಿಸ್ಮಿಲ್ಲಾ ಬೇಗಂ ಕಾಲಿಮಿರ್ಚಿ ಅವರಿಗೆ ಗೌರವ ಡಾಕ್ಟರೇಟ್ ಪದವಿ
ಹಂಪಿ : ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ 31 ನೇ ವಾರ್ಷಿಕ ಘಟಿಕೋತ್ಸವದ ನುಡಿಹಬ್ಬ ಕಾರ್ಯಕ್ರಮದಲ್ಲಿ ಕರ್ನಾಟಕದ ಘನವೆತ್ತ ರಾಜ್ಯಪಾಲರಾದ ಶ್ರೀ ತಾವರಚಂದ ಗೆಹಲೋಟ್ ಅವರು ಶ್ರೀಮತಿ ಬಿಸ್ಮಿಲ್ಲಾ ಬೇಗಂ ಕಾಲಿಮಿರ್ಚಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು.
ಹಂಪಿ ವಿಶ್ವವಿದ್ಯಾಲಯದ ಡಾ ಚಂದ್ರಶೇಖರ ತಬೋಜಿಯವರ ಮಾರ್ಗದರ್ಶನದಲ್ಲಿ ಶ್ರೀಮತಿ ಬಿಸ್ಮಿಲ್ಲಾ ಬೇಗಂ ಕಾಲಿಮಿರ್ಚಿ ಅವರು ಇತಿಹಾಸ ವಿಭಾಗದ ಬೆಳಗಾವಿ ಪ್ರದೇಶದ ಮುಸ್ಲಿಂ ಸಮುದಾಯಗಳು, ಚಾರಿತ್ರಿಕ ಅಧ್ಯಯನ ವಸಾಹತು ಕಾಲದಿಂದ ಕರ್ನಾಟಕದ ಏಕೀಕರಣದವರೆಗೆ ಎಂಬ ಮಂಡಿಸಿದ ಮಹಾ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಸಂದಿದೆ.
ಶ್ರೀಮತಿ ಬಿಸ್ಮಿಲ್ಲಾ ಬೇಗಂ ಕಾಲಿಮಿರ್ಚಿ ಅವರ ಈ ಒಂದು ಅಧ್ಯಯನಕ್ಕೆ ಅವರ ಪತಿ ಗೋಕುಲ್ ರಸ್ತೆ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ಜೆ. ಎಮ್. ಕಾಲಿಮಿರ್ಚಿ ಅವರು ಬೆನ್ನೆಲುಬು ಆಗಿ ನಿಂತಿದ್ದರು ಅಂದ್ರೆ ತಪ್ಪಾಗದು. ಒಟ್ಟಾರೆ ಒಬ್ಬ ಯಶಸ್ವಿ ಮಹಿಳೆ ಹಿಂದೆ ಒಬ್ಬ ಪುರುಷನ ಪಾತ್ರವಿದೆ ಅನ್ನೋದಕ್ಕೆ ಇದು ಜೀವಂತ ಸಾಕ್ಷಿ.
9ಲೈವ್ ನ್ಯೂಸ್ ಹುಬ್ಬಳ್ಳಿ