ಚೀನಾದಂತೆ ಬಂದರೆ ಸೇನೆಯಂತೆ ಹಿಮ್ಮೆಟ್ಟಿಸುತ್ತೇವೆ : ರಾವತ್ ಗೆ ಸಿಎಂ ತಿರುಗೇಟು

ಬೆಳಗಾವಿ: ಅವರು ಚೈನಾ ತರ ಬಂದರೆ, ನಮ್ಮ ಕನ್ನಡಿಗರು ಅದನ್ನು ಭಾರತೀಯ ಸೇನೆಯಂತೆ ಹಿಮ್ಮೆಟ್ಟಿಸುತ್ತಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಂಜಯ್ ರಾವತ್ ಗೆ ತಿರುಗೇಟು ನೀಡಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು
ಇಂತಹ ಉದ್ಧಟತನ ಹೇಳಿಕೆ ಕೊಟ್ಟರೆ ಪ್ರಯೋಜನವೂ ಇಲ್ಲ. ರಾಜಕೀಯದ ಸಲುವಾಗಿ ಅವರು ಈ ರೀತಿ ಮಾತಾಡಿದ್ದಾರೆ. ಅದನ್ನು ಕಾರ್ಯಗತ ಮಾಡಲು ಸಾಧ್ಯವಿಲ್ಲ. ಒಂದು ರಾಜ್ಯ ಇನ್ನೊಂದು ರಾಜ್ಯಗಳ ಸಂಬಂಧ ಇದ್ದೇ ಇರುತ್ತದೆ ಎಂದರು.
ಈಗಾಗಲೇ ಗಡಿ ವಿವಾದ ಸುಪ್ರೀಂನಲ್ಲಿದೆ. ಅವರಿಗೆ ಅಷ್ಟು ಶಕ್ತಿ ಇದ್ದರೆ ಅಲ್ಲಿ ಫೈಟ್ ಮಾಡಲಿ. ನಮಗೆ ವಿಶ್ವಾಸ ಇದೆ. ಸಂವಿಧಾನದ ಪ್ರಕಾರ ನಮ್ಮ ವಾದ ಪ್ರಬಲವಾಗಿದೆ. ಏನೇ ಇದ್ದರೂ ನಮ್ಮ ವಾದವನ್ನು ಮಂಡಿಸುತ್ತೇವೆ ಎಂದರು.
ಸಂಜಯ್ ರಾವತ್ ಯಾರು? ಯಾವಾಗಲೂ ಅವರು ಪ್ರಚೋದನೆ ಹೇಳಿಕೆ ಕೊಡುತ್ತಾರೆ. ಚೀನಾದಂತೆ ಬಂದರೆ ಕನ್ನಡಿಗರು ಸೇನೆಯಂತೆ ಹಿಮ್ಮೆಟ್ಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.