ಬೆಂಗಳೂರಿನಲ್ಲಿ 'ಹಾಫ್ ಹೆಲ್ಮೆಟ್' ಧರಿಸಿ 'ರೂಲ್ಸ್ ಬ್ರೇಕ್' ಮಾಡಿದ ಪೊಲೀಸ್ ಗೆ ಬಿತ್ತು ದಂಡ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿ ಓಡಾಡಿದರೆ ಪೊಲೀಸರು ದಂಡ ವಿಧಿಸಲಿದ್ದಾರೆ.
ಇದೀಗ ಬೆಂಗಳೂರಿನ ಆರ್. ಟಿ. ನಗರ ಸಂಚಾರಿ ಠಾಣೆ ಪೊಲೀಸರು ಹಾಫ್ ಹೆಲ್ಮೆಟ್ ಧರಿಸಿದ್ದ ಸಂಚಾರಿ ಪೊಲೀಸರಿಗೆ ದಂಡ ವಿಧಿಸಿದ್ದಾರೆ.. ಪೊಲೀಸರ ವಿರುದ್ಧ ಹಾಫ್ ಹೆಲ್ಮೆಟ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಪೂರ್ತಿ ಮುಖ ಮುಚ್ಚದ, ಐಎಸ್‌ಐ ಮಾರ್ಕ್ ಇಲ್ಲದ, ಹಾಫ್ ಹೆಲ್ಮೆಟ್ ಧರಿಸಬೇಡಿ ಎಂದು ಸಂಚಾರಿ ಪೊಲೀಸರು ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಗರದಲ್ಲಿ ಸಂಪೂರ್ಣವಾಗಿ ಹಾಫ್ ಹೆಲ್ಮೆಟ್ ನಿಷೇಧಿಸಿದ್ದಾರೆ. ಈ ಕುರಿತು ಟ್ವೀಟ್ ಸಹ ಮಾಡಿದ್ದಾರೆ. ಹಾಫ್ ಹೆಲ್ಮೆಟ್ ಹಾಕಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ದಂಡವಿಧಿಸಿರುವುದನ್ನು ಆರ್ ಟಿ ನಗರದ ಸಂಚಾರಿ ಪೊಲೀಸರು ಫೋಟೋ ಸಮೇತ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಪೊಲೀಸರು ಹಾಫ್ ಹೆಲ್ಮೆಟ್ ಧರಿಸಿ ಓಡಾಡುತ್ತಿದ್ದಾರೆ. ಅವರಿಗೆ ಯಾಕೆ ಫೈನ್ ಹಾಕೋದಿಲ್ಲ, ಜನಸಾಮಾನ್ಯರಿಗೆ ಒಂದು ರೂಲ್ಸ್..ಪೊಲೀಸರಿಗೆ ಒಂದು ರೂಲ್ಸ್..? ಎಂದು ಜನರು ಟೀಕೆ ಮಾಡಿದ್ದರು ಈ ಹಿನ್ನೆಲೆ.. ಪೊಲೀಸ್ ಇಲಾಖೆ ಕಾನೂನು ಮತ್ತು ಸುವ್ಯವಸ್ಥೆ, ಸಂಚಾರಿ ಪೊಲೀಸರಿಗೆ ಹಾಫ್ ಹೆಲ್ಮೆಟ್ ಧರಿಸದಂತೆ ಸೂಚನೆ ನೀಡಿತ್ತು. ಈ ಸೂಚನೆಯನ್ನು ಉಲ್ಲಂಘನೆ ಮಾಡಿದರೆ ಪೊಲೀಸರಿಗೂ ದಂಡ ಹಾಕಲಾಗುತ್ತದೆ ಎಂದು ಹೇಳಿತ್ತು.
ಇದೀಗ ಬೆಂಗಳೂರಿನ ಆರ್. ಟಿ. ನಗರ ಸಂಚಾರಿ ಠಾಣೆ ಪೊಲೀಸರು ಹಾಫ್ ಹೆಲ್ಮೆಟ್ ಧರಿಸಿದ್ದ ಸಂಚಾರಿ ಪೊಲೀಸರಿಗೆ ದಂಡ ವಿಧಿಸಿದ್ದಾರೆ. ಈ ಕುರಿತು ಟ್ವೀಟ್ ಸಹ ಮಾಡಿದ್ದಾರೆ. ಪೊಲೀಸರ ವಿರುದ್ಧ ಹಾಫ್ ಹೆಲ್ಮೆಟ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಪೂರ್ತಿ ಮುಖ ಮುಚ್ಚದ, ಐಎಸ್‌ಐ ಮಾರ್ಕ್ ಇಲ್ಲದ, ಹಾಫ್ ಹೆಲ್ಮೆಟ್ ಧರಿಸಬೇಡಿ ಎಂದು ಸಂಚಾರಿ ಪೊಲೀಸರು ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಗರದಲ್ಲಿ ಸಂಪೂರ್ಣವಾಗಿ ಹಾಫ್ ಹೆಲ್ಮೆಟ್ ನಿಷೇಧಿಸಿದ್ದಾರೆ.
ಹಾಫ್ ಹೆಲ್ಮೆಟ್‌ಗಳಿಂದ ಅಪಾಯ ಹೆಚ್ಚು ಎಂದು ತಜ್ಞರು ಸಹ ವರದಿ ನೀಡಿದ್ದಾರೆ. ಐಎಸ್‌ಐ ಮಾರ್ಕ್ ಇಲ್ಲದ ಹೆಲ್ಮೆಟ್‌ಗಳು ಗಟ್ಟಿ ಇರುವುದಿಲ್ಲ, ಹಾಫ್ ಹೆಲ್ಮೆಟ್ ಪೂರ್ತಿ ಮುಖ ಮುಚ್ಚುವುದಿಲ್ಲ. ಇದರಿಂದಾಗಿ ಅಪಘಾತಗಳು ಆದಾಗ ಮೆದುಳಿಗೆ ಹೆಚ್ಚಿನ ಗಾಯ ಉಂಟಾಗುತ್ತದೆ ಎಂದು ತಜ್ಞರು ಸಹ ವರದಿ ನೀಡಿದ್ದಾರೆ.