ಔಟಾಪ್ ಔಟ್ ಪಡೆಯುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮಸ್ಥಾನ
ಚಿಕ್ಕಬಳ್ಳಾಪುರ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮತ್ತೆ ಜಿಲ್ಲೆ ಅಗ್ರಸ್ಥಾನ ಪಡೆದಿದೆ. ರಾಜ್ಯದಲ್ಲಿ ಔಟಾಪ್ ಔಟ್ ಪಡೆದುಕೊಂಡ ೧೫೭ ವಿದ್ಯಾರ್ಥಿಗಳ ಪೈಕಿ ೩೦ ವಿದ್ಯಾರ್ಥಿಗಳು ೬೨೫ಕ್ಕೆ ೬೨೫ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ ಶೇಕಡಾ ೯೦ ವಿದ್ಯಾರ್ಥಿಗಳು ಎ ಗ್ರೇಡ್ ಗಳಿಸಿದ್ದಾರೆ. ರಾಜ್ಯದಲ್ಲಿ ಔಟಾಪ್ ಔಟ್ ಅಂಕಪಡೆದ ೧೫೭ ವಿದ್ಯಾರ್ಥಿಗಳ ಪೈಕಿ ೩೦ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರ ಜಿಲ್ಲೆಯವರು. ಎಗ್ರೇಡ್ ಪಟ್ಟಿಯಲ್ಲೂ ಚಿಕ್ಕಬಳ್ಳಾಪುರ ಶೇ. ೯೦ರಷ್ಟು ತನ್ನದಾಗಿಸಿಕೊಂಡಿದೆ. ಕೊರೊನಾ ಮಹಾಮಾರಿ ಇಡೀ ಜಿಲ್ಲೆಯನ್ನ ಆವರಿಸಿ ಭಯ ಹುಟ್ಟಿಸಿದ್ದ ವೇಳೆಯಲ್ಲಿಯೂ ಶಿಕ್ಷಣ ಕ್ಷೇತ್ರದತ್ತ ಗಮನ ಹರಿಸಿ ಕಳೆದ ವರ್ಷದ ಫಲಿತಾಂಶದ ಅಗ್ರಸ್ಥಾನ ಉಳಿಸಿಕೊಳ್ಳಲು ಶ್ರಮಿಸಿದ್ದ ಡಿಸಿ ಆರ್.ಲತಾ ಸಂತಸ ವ್ಯಕ್ತಪಡಿಸಿದ್ದಾರೆ. ಆನ್ ಲೈನ್ ಮೂಲಕ ಎಲ್ಲ ಪಟ್ಟುಗಳನ್ನು ವಿವರಿಸಿದ ಶಿಕ್ಷಕರಿಗೆ ಆಯಾ ಶಾಲಾ ಆಡಳಿತ ಮಂಡಳಿಗೆ ಮತ್ತೆ ನಂಬರ್ ಒನ್ ಪಟ್ಟ ಉಳಿಸಿದ ಎಲ್ಲಾ ವಿದ್ಯಾರ್ಥಿ ವೃಂದಕ್ಕೆ ಅಭಿನಂದನೆಗಳನ್ನ ತಿಳಿಸಿದ್ದಾರೆ.