13ರಂದು ಪೂರ್ವಭಾವಿ ಸಭೆ
ಶಿಗ್ಗಾಂವಿ ಪಟ್ಟಣದ ಕಿತ್ತೂರರಾಣಿ ಚೆನ್ನಮ್ಮ ಸರ್ಕಲ್ ನಲ್ಲಿರುವ ವೀರಮಾತೆ ಕಿತ್ತೂರರಾಣಿ ಚೆನ್ನಮ್ಮನ ಪುತ್ಥಳಿ ಅನಾವರಣ ಕಾರ್ಯಕ್ರಮದ ಕುರಿತು ಚರ್ಚಿಸಲು ದಿ.13 ಶನಿವಾರ ರಂದು ಮಧ್ಯಾಹ್ನ 3 ಘಂಟೆಗೆ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆಗೆ ಶಿಗ್ಗಾಂವಿ ಸವಣೂರು ತಾಲೂಕಿನ ಎಲ್ಲ ಗ್ರಾಮಗಳ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ಸಮಾಜದ ಮುಖಂಡರಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಾಜಕೀಯ ಮುಖಂಡರುಗಳು ವೀರಮಾತೆ ಕಿತ್ತೂರರಾಣಿ ಚೆನ್ನಮ್ಮ ಅಭಿಮಾನಿ ಬಳಗದವರು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆ ನೀಡಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಶಿಗ್ಗಾಂವಿ ತಾಲೂಕು ಅಧ್ಯಕ್ಷ ಶಿವಾನಂದ ಬಾಗೂರ 9 live News ಮಾಹಿತಿ ನೀಡಿದರು.